ADVERTISEMENT

ಮಹಾವೀರರ ಅಹಿಂಸಾ ತತ್ವ ಪ್ರಸ್ತುತ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 4:35 IST
Last Updated 15 ಏಪ್ರಿಲ್ 2022, 4:35 IST
ಊರಿನ ಪ್ರಮುಖ ರಸ್ತೆಯಲ್ಲಿ ಭಗವಾನ್‌ ಮಹಾವೀರರ ಪಲ್ಲಕ್ಕಿ ಉತ್ಸವ ಜರುಗಿದವು
ಊರಿನ ಪ್ರಮುಖ ರಸ್ತೆಯಲ್ಲಿ ಭಗವಾನ್‌ ಮಹಾವೀರರ ಪಲ್ಲಕ್ಕಿ ಉತ್ಸವ ಜರುಗಿದವು   

ರಿಪ್ಪನ್‌ಪೇಟೆ:ಭಗವಾನ್‌ ಮಹಾವೀರರ ಅಹಿಂಸಾ ತತ್ವ, ಸಂದೇಶಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಹೊಂಬುಜ ಕ್ಷೇತ್ರದಲ್ಲಿ ಮಹಾವೀರ ಜಯಂತಿ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಕಾಲಮಾನದಲ್ಲಿ ಮಾನವನ ಸಂಕುಚಿತ ಮನೋಭಾವದಿಂದ ಮಾನವೀಯ ಸಂಬಂಧಗಳ ಮೌಲ್ಯ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ.ಪ್ರತಿಯೊಬ್ಬ ವ್ಯಕ್ತಿಯೂ ಸದೃಢ ಸಮಾಜ ನಮ್ಮ ಗುರಿಯಾಗಿಸಿಕೊಂಡು ‘ಜೀವಿಸು ಜೀವಿಸಲು ಬಿಡು ’ ಎಂಬ ಮಹಾವೀರರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಯುವ ಸಮೂಹವನ್ನು ಸನ್ಮಾರ್ಗದ ದಿಕ್ಕಿನಲ್ಲಿ ಕರೆದೊಯ್ಯಬೇಕಿದೆ ಎಂದು ಸಲಹೆ ನೀಡಿದರು.

ADVERTISEMENT

ಮಹಾವೀರ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನಂತರ ಊರಿನ ಪ್ರಮುಖ ರಸ್ತೆಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.