ADVERTISEMENT

ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವ ಜ. 14ಕ್ಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 20:11 IST
Last Updated 7 ಜನವರಿ 2026, 20:11 IST
<div class="paragraphs"><p>ಮಕರ ಸಂಕ್ರಾಂತಿ ಹಬ್ಬದ ಕಬ್ಬು, ಎಳ್ಳು ಬೆಲ್ಲ </p></div>

ಮಕರ ಸಂಕ್ರಾಂತಿ ಹಬ್ಬದ ಕಬ್ಬು, ಎಳ್ಳು ಬೆಲ್ಲ

   

–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜ.14ರಂದು ಮಕರ ಸಂಕ್ರಾಂತಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನ ಸಂಘಟನಾ ಕಾರ್ಯದರ್ಶಿ ಬೆಳುವಾಯಿ ನವೀನ್ ಹೆಗ್ಡೆ ತಿಳಿಸಿದರು. 

ADVERTISEMENT

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಸುಮಾರು 50 ಸಾವಿರಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಇದೆ. ಚಲನಚಿತ್ರ ನಟ ಶಿವರಾಜ್‌ ಕುಮಾರ್, ಜಾನಪದ ಗಾಯಕ ಕೆ. ಯುವರಾಜ್ ಮತ್ತು ಹುಬ್ಬಳ್ಳಿಯ ಅಯ್ಯಪ್ಪ ಗುರು ಸ್ವಾಮಿಗಳಾದ ಶಿವಾನಂದ ಬಾರ್ಕಿ ಅವರಿಗೆ ಹರಿಹರಾತ್ಮಜ ಪೀಠ ಪ್ರಶಸ್ತಿ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಚಿವರಾದ ಜಿ. ಪರಮೇಶ್ವರ, ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಭಾಗವಹಿಸಲಿದ್ದಾರೆ ಎಂದರು.