ತೀರ್ಥಹಳ್ಳಿ: ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮ್ಯಾಮ್ಕೋಸ್ ಚುನಾವಣೆ ಪ್ರಕ್ರಿಯೆ ದೋಷದಿಂದ ಕೂಡಿದ್ದು, ಕ್ಷೇತ್ರವಾರು ವಿಂಗಡಿಸಿ ಚುನಾವಣೆ ನಡೆಸಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕಡ್ತೂರು ದಿನೇಶ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
‘ಒಂದು ಪಕ್ಷ ಹಾಗೂ ಅದರ ಸಿದ್ಧಾಂತ ಆಧರಿತ ಗುಂಪುಗಳನ್ನು ರಚಿಸಿ ಸಹಕಾರ ಭಾರತಿಗೆ ಅನುಕೂಲ ಆಗುವಂತೆ ಹಳೆಯ ವಿಧಾನ ಮುಂದುವರಿಸಿಕೊಂಡು ಬಂದಿದೆ. ಆರಂಭದಲ್ಲಿ 6,000 ಇದ್ದ ಷೇರುದಾರರ ಸಂಖ್ಯೆ ಈಗ 31,000ಕ್ಕೆ ಹೆಚ್ಚಳವಾಗಿದೆ. ಅಭ್ಯರ್ಥಿ ಬಗ್ಗೆ ಗೊತ್ತಿಲ್ಲದೆ ಮೂರೂ ಜಿಲ್ಲೆಯ ಸದಸ್ಯರು ಪಕ್ಷದ ಕಾರಣಕ್ಕೆ ಮತ ನೀಡುವ ಅವೈಜ್ಞಾನಿಕ ಪದ್ಧತಿ ರೂಢಿಯಲ್ಲಿದೆ. ರೈತರ ಹಿತ ಕಾಪಾಡಲು ಇಂತಹ ಪ್ರಕ್ರಿಯೆ ಸರಿಯಲ್ಲ’ ಎಂದು ದೂರಿದ್ದಾರೆ.
ಮ್ಯಾಮ್ಕೋಸ್‌ನಲ್ಲಿ ಒಟ್ಟು 19 ನಿರ್ದೇಶಕ ಸ್ಥಾನಗಳಿವೆ. ಈಗ ಉತ್ತರದಾಯಿತ್ವ ಇಲ್ಲ. ಹಿಂದೆ ಮತ ಚಲಾವಣೆ ಮಾಡಲು ಶಿವಮೊಗ್ಗದ ಕೇಂದ್ರ ಸ್ಥಾನಕ್ಕೆ ತೆರಳಬೇಕಿತ್ತು. 2013ರಲ್ಲಿ ಕಿಮ್ಮನೆ ರತ್ನಾಕರ ತಾಲ್ಲೂಕು ಕೇಂದ್ರದಲ್ಲಿ ಮತ ನೀಡುವ ವ್ಯವಸ್ಥೆ ರೂಪಿಸಿದ್ದರು. ಅದೇ ರೀತಿ ಚುನಾವಣಾ ವ್ಯವಸ್ಥೆ ಕೂಡ ಕ್ಷೇತ್ರವಾರು ಸ್ಥಾನ ನಿಗದಿಪಡಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.