ADVERTISEMENT

ಸಾಗರ | ಮಾರಿಕಾಂಬಾ ಜಾತ್ರಾ: ಸಂಭ್ರಮ ಹೆಚ್ಚಿಸುವ ಸಾಂಸ್ಕೃತಿಕ ಸಡಗರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:56 IST
Last Updated 3 ಫೆಬ್ರುವರಿ 2026, 2:56 IST
ಮಾರಿಕಾಂಬಾ ಜಾತ್ರೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ.
ಮಾರಿಕಾಂಬಾ ಜಾತ್ರೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ.   

ಪ್ರತಿ ಬಾರಿಯ ಮಾರಿಕಾಂಬಾ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಪ್ರತೀತಿ ಮೊದಲಿನಿಂದಲೂ ಇದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರಸಿದ್ಧ ಕಲಾವಿದರು ಇಲ್ಲಿಗೆ ಬಂದು ವೈವಿಧ್ಯಮ ಕಾರ್ಯಕ್ರಮ ನಡೆಸುವ ಜೊತೆಗೆ ಸ್ಥಳೀಯ ಕಲಾವಿದರಿಗೂ ವೇದಿಕೆ ಕಲ್ಪಿಸಲಾಗುತ್ತದೆ.

ಈ ಬಾರಿ ಫೆ.4ರಿಂದ 11ರವರೆಗೆ ಗಾಂಧಿ ಮೈದಾನದಲ್ಲಿರುವ ನಗರಸಭೆಯ ಬಯಲು ರಂಗಮಂದಿರದಲ್ಲಿ ನಿರ್ಮಿಸಿರುವ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.

ಫೆ.4 ಸಂಜೆ 5.30 : ತೇಜಸ್ವಿ ತಬಲಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲಾ ವಾದನ, 6.30 : ಶಾಂತಾ ಶೆಟ್ಟಿ ಅವರಿಂದ ಸುಗಮ ಸಂಗೀತ, 7.30 : ನಾಟ್ಯತರಂಗ ಸಂಸ್ಥೆ ಕಲಾವಿದರಿಂದ ಭರತನಾಟ್ಯ. 9 ಕ್ಕೆ : ಶಿರೋಡ್ಕರ್ ತಂಡದಿಂದ ಕಥಕ್ ನೃತ್ಯ. 9.30 : ಮೈಸೂರಿನ ಸುನ್ನುತ್ ಶಾಲೋಮ್ ತಂಡದಿಂದ ತತ್ವಗೀತೆ-ಭಾವಗೀತೆ-ಜಾನಪದ ಗೀತೆ.

ADVERTISEMENT

ಫೆ. 5 : ಸಂಜೆ 5.30 ಕ್ಕೆ ಜೀವನ್ಮುಖಿ ತಂಡದಿಂದ ಚೌಡಿಕೆ ಕುಣಿತ, 6 ರಿಂದ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಗಾಯನ, 6.30 : ಯೋಗೇಶ್ ಕುಮಾರ್, ಸ್ನೇಹಾ ನಾರಾಯಣ್ ತಂಡದಿಂದ ಯುಗಳ ನೃತ್ಯ ಝೇಂಕಾರ್ ಭರತನಾಟ್ಯ ಪ್ರದರ್ಶನ, 7.30: ಉದ್ಘಾಟನಾ ಸಮಾರಂಭ, ಉಪಸ್ಥಿತಿ : ಚಲನಚಿತ್ರ ನಟ ಶಿವರಾಜ್ ಕುಮಾರ್, ರಾತ್ರಿ 9 ಕ್ಕೆ: ಝೇಂಕಾರ್ ಮೆಲೋಡೀಸ್ ತಂಡದಿಂದ ರಸಮಂಜರಿ.

ಫೆ. 6 ಕ್ಕೆ : 5.30 : ವಾರಿಧಿ ನೃತ್ಯ ಕಲಾ ತಂಡದಿಂದ ನೃತ್ಯ, 6 : ದೈವಜ್ಞ ಸಾಂಸ್ಕೃತಿಕ ಬಳಗದಿಂದ ದೇವಿ ನೃತ್ಯ, 6.30: ತ್ರಿಧಾತ್ ಸಾಗರ್ ರಿಂದ ಸ್ಯಾಕ್ಸೊಪೋನ್ ವಾದನ, 8.30 : ನಟರಾಜ ನಾಟ್ಯ ಕಲಾ ಸಂಸ್ಥೆಯಿಂದ ಭರತನಾಟ್ಯ, 9 : ಶೀತಪ್ರಭುರಿಂದ ಭರತನಾಟ್ಯ, 9.30 : ಸುರೇಖ ಹೆಗಡೆ ತಂಡದಿಂದ ರಸಮಂಜರಿ.

ಫೆ.7 : 5.30 : ಅರುಣೋದಯ ಕಲಾನಿಕೇತನ ತಂಡದಿಂದ ಸಿತಾರ್ ವಾದನ, 6.30 : ಸಿಂಧು ವಿ.ಭಟ್ ರಿಂದ ಭರತನಾಟ್ಯ , 7 : ಅಭಿಷೇಕ್ ಜಿ.ರಾವ್ ರಿಂದ ರಸಮಂಜರಿ, 8.30 : ಮೈಸೂರಿನ ಗಾಯಕ, ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ ಸಂಗಡಿಗರಿಂದ ರಸಮಂಜರಿ,

ಫೆ. 8: 5.30 : ಅಕ್ಷತಾ ಹೆಗಡೆರಿಂದ ಭರತನಾಟ್ಯ, 6 : ಬೆಂಗಳೂರಿನ ಪುರಂದರ ಇಂಟರ್ ನ್ಯಾಶನಲ್ ಟ್ರಸ್ಟ್ ನಿಂದ ಜಾನಪದ ,ಭಕ್ತಿ, ಭಾವಗೀತೆಗಳ ಗಾಯನ, 7.30 : ಶಿವಂ ನೃತ್ಯಾಲಯದಿಂದ ಭರತನಾಟ್ಯ, 8 : ರಾಜು ಜನ್ನೇಹಕ್ಲು ತಂಡದಿಂದ ಜಾನಪದ ನೃತ್ಯ ಗಾಯನ, 8.30 : ಬೆಂಗಳೂರಿನ ಶೈಲೂಷಂ ಆರ್ಟ್ಸ್ ಕ್ರಿಯೇಷನ್ ಸಂಸ್ಥೆಯ ಅನಂತ ವಿಕ್ರಮ ಸಂಗಡಿಗರಿಂದ ಚಲನಚಿತ್ರ, ಭಾವಗೀತೆ, ಜಾನಪದ ಗೀತೆ ಗಾಯನ.

ಫೆ.9 : 5.30 : ವೀರಮಾರುತಿ ಮಹಿಳಾ ಮಂಡಳಿಯಿಂದ ಲಂಬಾಣಿ ನೃತ್ಯ, 6: ಲಾಸ್ಯ ರಂಜಿತಾ ನೃತ್ಯ ಶಾಲೆಯಿಂದ ಭರತನಾಟ್ಯ, 6.30 : ವಲ್ಲಿ ಸೈದೂರ್ ರಿಂದ ಕಲಾ ವೈವಿಧ್ಯ, 7 : ಬೆಂಗಳೂರಿನ ಗಾನಸಿದ್ದಿ ಗಂಗಾ ಸಾಂಸ್ಕೃತಿಕ ಟ್ರಸ್ಟ್ ನಿಂದ ರಸಮಂಜರಿ, 8.30 : ನೌಷಾದ್ ಹರ್ಲಾಪುರ, ನಿಷಾದ್ ಹರ್ಲಾಪುರ ಇವರಿಂದ ದಾಸರ ಪದ- ಜಾನಪದ ಗೀತೆ ಗಾಯನ.

ಫೆ. 10: 5.30 : ಸಾಗರ ಕರಾಟೆ ಇನ್ಸಿಟ್ಯೂಟ್ ನಿಂದ ಕರಾಟೆ ಪ್ರದರ್ಶನ, 6 : ಶಿವಕುಮಾರ ಮಹಾಂತ ಸಂಗಡಿಗರಿಂದ ಸುಗಮ ಸಂಗೀತ, 7.30 : ಸಮಾರೋಪ ಸಮಾರಂಭ, 8.30 : ಸ್ಪಂದನ ರಂಗ ತಂಡದಿಂದ ಕೋಲಾಟ. 9 : ಮೆಲ್ವಿನ್ ಹಾಗೂ ಜೀ ಕನ್ನಡ ಖ್ಯಾತಿಯ ಗಾಯಕರಿಂದ ರಸಮಂಜರಿ.

ಫೆ 11: 5.30 : ಆಕಾಶ್ ಜಿ.ಟಿ.ತಂಡದಿಂದ ಕರಾಟೆ ಜುಡೋ, 6 : ಕೊಡಚಾದ್ರಿ ಎಜ್ಯುಕೇಷನ್ ಟ್ರಸ್ಟ್ ನಿಂದ ಮಲ್ಲಕಂಬ ಪ್ರದರ್ಶನ, 6.30 : ಚಂದನ / ಅರ್ಚನ ಸಂಗಡಿಗರಿಂದ ಭರತನಾಟ್ಯ, 7 : ಉದಯ ಕಲಾವಿದರು ತಂಡದಿಂದ ಕುಂಟಾ-ಕುಂಟಾ-ಕುರುವತ್ತಿ ನಾಟಕ, 8 : ಕವನ ಕಾರ್ಗಲ್ ತಂಡದಿಂದ ಭರತನಾಟ್ಯ, 8.30 : ನಾಟ್ಯಶ್ರೀ ಕಲಾ ತಂಡದಿಂದ ಯಕ್ಷಗಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.