ADVERTISEMENT

ಜಂಬಗಾರು ರೈಲು ನಿಲ್ದಾಣಕ್ಕೆ ಲೋಹಿಯಾ ಹೆಸರಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 13:33 IST
Last Updated 7 ಜನವರಿ 2020, 13:33 IST
ಶಿವಮೊಗ್ಗದಲ್ಲಿ ಮಂಗಳವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್‌ ಪದಾಧಿಕಾರಿಗಳು ಸಾಗರದ ಜಂಬಗಾರು ರೈಲುನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಹೆಸರಿಡಬೇಕು ಎಂದು ಆಗ್ರಹಿಸಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಮಂಗಳವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್‌ ಪದಾಧಿಕಾರಿಗಳು ಸಾಗರದ ಜಂಬಗಾರು ರೈಲುನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಹೆಸರಿಡಬೇಕು ಎಂದು ಆಗ್ರಹಿಸಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ಸಾಗರದ ಜಂಬಗಾರು ರೈಲುನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಹೆಸರುಇಡಬೇಕುಎಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರಟ್ರಸ್ಟ್‌ ಪದಾಧಿಕಾರಿಗಳು ಮಂಗಳವಾರಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಜಂಬಗಾರು ರೈಲುನಿಲ್ದಾಣಕ್ಕೆ ಲೋಹಿಯಾ ಅವರ ಹೆಸರುನಾಮಕರಣ ಮಾಡುವಂತೆಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ.ಪ್ರಗತಿಪರ ಸಂಘಟನೆಗಳು, ಸಮಾಜವಾದಿ ಮುಖಂಡರು ಸೇರಿ 2001ರಲ್ಲಿಯೇ ಈ ರೈಲು ನಿಲ್ದಾಣದ ಎದುರು ಡಾ.ರಾಮಮನೋಹರ ಲೋಹಿಯಾ ರೈಲುನಿಲ್ದಾಣ ಎಂಬ ನಾಮಫಲಕ ಹಾಕಿದ್ದರುಎಂದು ನೆನಪು ಮಾಡಿದರು.

ಲೋಹಿಯಾ ಅವರು 1951ರಲ್ಲಿ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಲು ಬಂದಾಗ ಮಧ್ಯರಾತ್ರಿ ಜಂಬಗಾರು ರೈಲು ನಿಲ್ದಾಣದಲ್ಲೇ ಬಂಧನಕ್ಕೆ ಒಳಗಾಗಿದ್ದರು. ಭೂ ಒಡೆತನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅವರನ್ನುಪೊಲೀಸರುಬಂಧಿಸಿದ್ದರು.ಚರಿತ್ರೆಯನೆನಪಿಗಾಗಿ, ಅವರ ಹೋರಾಟದ ಭಾಗವಾಗಿ ಹೆಸರು ಇಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮಾಜಿ ಶಾಸಕ ಬಿ.ಸ್ವಾಮಿರಾವ್, ಟ್ರಸ್ಟ್ ಮುಖಂಡರಾದ ಕಲ್ಲೂರು ಮೇಘರಾಜ್, ಎಸ್.ವಿ.ರಾಜಮ್ಮ, ಎಚ್.ಎಂ.ಸಂಗಯ್ಯ, ಕೋಡ್ಲು ಶ್ರೀಧರ್, ಶಂಕರಾನಾಯ್ಕ, ಸೋಮಯ್ಯ, ಆದಿಶೇಷಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.