ADVERTISEMENT

ಲವ್ ಜಿಹಾದ್‌ನಿಂದ ಶಾಂತಿ ಭಂಗ: ಕೆ.ಈ. ಕಾಂತೇಶ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 15:58 IST
Last Updated 18 ಮಾರ್ಚ್ 2025, 15:58 IST
ಶಿವಮೊಗ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ರಾಷ್ಟ್ರಭಕ್ತ ಬಳಗದ ಯುವ ನಾಯಕ ಕೆ.ಈ. ಕಾಂತೇಶ್ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ರಾಷ್ಟ್ರಭಕ್ತ ಬಳಗದ ಯುವ ನಾಯಕ ಕೆ.ಈ. ಕಾಂತೇಶ್ ಉದ್ಘಾಟಿಸಿದರು   

ಶಿವಮೊಗ್ಗ: ‘ಲವ್ ಜಿಹಾದ್ ಎಂಬ ಬಲೆ ನಮ್ಮ ಮನೆಯ ಶಾಂತಿ ಕದಡುತ್ತಿದೆ. ಹೀಗಾಗಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಹಿಂದೂ ಯುವತಿಯರು ತಮ್ಮತನವನ್ನು ಕಾಪಾಡಿಕೊಳ್ಳಬೇಕು’ ಎಂದು ರಾಷ್ಟ್ರಭಕ್ತ ಬಳಗದ ಯುವ ನಾಯಕ ಕೆ.ಈ. ಕಾಂತೇಶ್ ಮನವಿ ಮಾಡಿದರು.

ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಬ್ಬ ಎಂಬ ಮನೋರಂಜನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೂ ಸಮುದಾಯ ಒಟ್ಟಾಗಿ ನಡೆಯುವ ಅನಿವಾರ್ಯತೆ ಇದೆ. ಪಾಲಕರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಕಾಳಜಿ, ಜಾಗ್ರತೆ ವಹಿಸುವುದು ಮುಖ್ಯ. ಹೆಣ್ಣುಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು’ ಎಂದರು.

ADVERTISEMENT

‘ಚಿಕ್ಕಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯುವಾಗ ಹೆಲ್ಮೆಟ್ ಧರಿಸಬೇಕು. ಟ್ರಾಫಿಕ್ ನಿಯಮ ಪಾಲಿಸಬೇಕು’ ಎಂದು ನಗರ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಭಾರತಿ ಸಲಹೆ ನೀಡಿದರು.

ಬಿವಿಐ ಶಿವಮೊಗ್ಗ ಅಧ್ಯಕ್ಷೆ ನಂದಾ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಚಿನ್ ಬೇದ್ರೆ, ಕಾರ್ಯದರ್ಶಿ ಸುನಿಲ್ ಗುಜ್ಜರ್, ಸಂಸ್ಥೆ ಗವರ್ನರ್ ಸುನಿಲ್ ಬೇದ್ರೆ, ಖಜಾಂಚಿ ಸ್ವಪ್ನ ಹರೀಶ್, ಮಹಿಳಾ ಕಲ್ಯಾಣ ನಿರ್ದೇಶಕಿ ಕೋಮಲ್, ಲತಾ ಬೇದ್ರೆ, ನಿಖಿಲ್, ಸುನಿಲ್ ಕಮಲಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.