ADVERTISEMENT

ಶಿವಮೊಗ್ಗಕ್ಕೆ ನಾಳೆ ಮಹಾಶ್ರಮಣ್ ಜೀ ಭೇಟಿ: ಪ್ರವಚನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 11:51 IST
Last Updated 14 ಡಿಸೆಂಬರ್ 2019, 11:51 IST

ಶಿವಮೊಗ್ಗ: ಆಚಾರ್ಯ ಮಹಾಶ್ರಮಣ್ ಜೀ ಅವರು ಸಾಧು-ಸಾದ್ವಿಯರ ಜತೆ ಹಮ್ಮಿಕೊಂಡಿರುವ ಅಹಿಂಸಾ ಯಾತ್ರೆ ಡಿ.16ರಂದು ಶಿವಮೊಗ್ಗಕ್ಕೆಬರುತ್ತಿದೆ. ಅಂದು ಪ್ರವಚನಇರುತ್ತದೆ.

ಮಹಾಶ್ರಮಣ್ ಜೀಅವರು ಅಹಿಂಸೆಯ ಯಾತ್ರೆಯನ್ನು 2014ರ ನವೆಂಬರ್ 9ರಂದು ದೆಹಲಿಯ ಕೆಂಪುಕೋಟೆಯಿಂದ ಆರಂಭಿಸಿದ್ದರು. ಪಾದಯಾತ್ರೆ ಮೂಲಕ ಅವರುಮೂರುದೇಶ ಮತ್ತು ಭಾರತದ 20 ರಾಜ್ಯಗಳಲ್ಲಿ 15 ಸಾವಿರ ಕಿ.ಮೀ.ಪ್ರಯಾಣಮಾಡಿದ್ದಾರೆ.
ಸದ್ಭಾವನೆಯ ಪ್ರಸಾರ, ನೈತಿಕತೆಯ ಪ್ರಚಾರ-ಪ್ರಸಾರ, ವ್ಯಸನ ಮುಕ್ತಿಯ ಅಭಿಯಾನ ಈ ಯಾತ್ರೆಯ ಮುಖ್ಯ ಉದ್ದೇಶ ಎಂದು ಶ್ರೀಜೈನ್ ಶ್ವೇತಾಂಬರ್ ತೇರಾಪಂಥ್ ಸಭಾ ಅಧ್ಯಕ್ಷ ಮದನ ರಾಜ್ ಸಂಚೇತಿಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.16ರಂದುಬೆಳಿಗ್ಗೆ 9.30ಕ್ಕೆ ಭದ್ರಾವತಿಯಿಂದ ಬರುವ ಯಾತ್ರೆಗೆಹೊಳೆ ಬಸ್‌ಲ್ದಾಣದ ಬಳಿ ಸ್ವಾಗತ ಕೋರಲಾಗುವುದು.ನಂತರ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಎನ್ಇಎಸ್ ಮೈದಾನಕ್ಕೆ ಕರೆ ತರಲಾಗುವುದು. 10.30ಕ್ಕೆ ಪ್ರವಚನ. ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ನೇಮಿಚಂದ್, ದಿನೇಶ್‌ಕುಮಾರ್, ವಸಂತ್‌ಕುಮಾರ್ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.