ADVERTISEMENT

ಜೆಎನ್‌ಎನ್‌ಸಿಇ: 13ರಿಂದ ಉದ್ಯಮಶೀಲತೆ ಸಮಿಟ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 12:55 IST
Last Updated 10 ಫೆಬ್ರುವರಿ 2020, 12:55 IST

ಶಿವಮೊಗ್ಗ: ಜವಾಹರ್‌ಲಾಲ್ ನೆಹರು ರಾಷ್ಟ್ರೀಯಎಂಜಿನಿಯರ್ ಕಾಲೇಜು ಎಂಬಿಎ ಸಭಾಂಗಣದಲ್ಲಿಫೆ.13ರಿಂದ 15ರವರೆಗೆ ‘ಕರ್ನಾಟಕಟೆಕ್ ಉದ್ಯಮಶೀಲತೆ ಸಮಿಟ್-2020’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉದ್ಯಮಶೀಲತೆ, ನಾವಿನ್ಯತೆ, ಸ್ಮಾರ್ಟ್‌ ಆ್ಯಪ್‌ಗಳು,ವಿಜ್ಞಾನ ತಂತ್ರಜ್ಞಾನಗಳ ಕುರಿತ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನವ ಉದ್ಯಮಿಗಳು, ವಿದ್ಯಾರ್ಥಿಗಳು, ಉದ್ಯಮಿಗಳಾಗ ಬಯಸುವವರು ಭಾಗವಹಿಸಬಹುದುಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಆರ್.ಮಹಾದೇವಸ್ವಾಮಿಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು, ಹೊಸ ಕಂಪನಿಗಳ ಆರಂಭ,2030ರ ವೇಳೆಗೆ ಒಂದು ಸಾವಿರ ಉದ್ಯೋಗ ಸೃಷ್ಟಿಸುವ ಮೂಲಕ ₨ 100 ಕೋಟಿ ಆದಾಯಗಳಿಸುವಗುರಿಇದೆ. ಸಭಾಂಗಣದ ಹಿಂಭಾಗದಲ್ಲಿ ವಿವಿಧ ಕಂಪನಿಗಳ ಎಕ್ಸಿಬಿಷನ್‌ ಮ್ಮಿಕೊಳ್ಳಲಾಗಿದೆ.ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಎಚ್.ರಾಬಿನ್ಸ್‌ನ್, ಅರುಣ್‌ ರಾವ್,ಸುಮನ್ ಸೇನ್ ಗುಪ್ತ, ನಾಗರಾಜ್, ಅಜಯ್ ಮುತ್ರೇಜ, ಸಮೀರ್‌ಕುಮಾರ್ಭಾಗವಹಿಸುವರು ಎಂದರು.

ADVERTISEMENT

ಫೆ.13ರ ಬೆಳಿಗ್ಗೆ 9.30ಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು. ಇನ್ವೆಂಟಸ್ ಇಂಡಿಯಾವ್ಯವಸ್ಥಾಪಕ ನಿರ್ದೇಶಕಸಮೀರ್‌ಕುಮಾರ್,ಎನ್‌ಇಎಸ್ಅಧ್ಯಕ್ಷ ಎ.ಎಸ್.ವಿಶ್ವನಾಥ್, ಸಹಕಾರ್ಯದರ್ಶಿ ಅಮರೇಂದ್ರ ಕಿರೀಟಿಭಾಗವಹಿಸುವರು.ಫೆ.14ರ ಸಂಜೆ 6ಕ್ಕೆಯಶಸ್ವಿ ಉದ್ಯಮಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮೂಡಬಿದರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವಉಪಸ್ಥಿತರಿರುವರುಎಂದು ವಿವರ ನೀಡಿದರು.

ಫೆ.15ರ ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್. ವಿದ್ಯಾಶಂಕರ್ ಸಮಾರೋಪಭಾಷಣ ಮಾಡುವರು. ಕೆನರಾ ಬ್ಯಾಂಕ್ ಮಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಯೋಗೀಶ್ ಆಚಾರ್ಯ, ಇಸ್ರೋ ಮಾಜಿ ನಿರ್ದೇಶಕ ಡಾ.ಎಸ್.ರಂಗರಾಜನ್, ಎನ್‌ಇಎಸ್ಕಾರ್ಯದರ್ಶಿ ಎಸ್.ಎನ್.ನಾಗರಾಜ್ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್ಇಎಸ್ ಅಧ್ಯಕ್ಷ ಎ.ಎಸ್.ವಿಶ್ವನಾಥ್, ಉಪಾಧ್ಯಕ್ಷ ಅಶ್ವತ್ಥ ನಾರಾಯಣಶೆಟ್ಟಿ, ಖಜಾಂಚಿ ಸಿ.ಆರ್. ನಾಗರಾಜ್, ಕುಲಸಚಿವ ಪ್ರೊ.ಹೂವಯ್ಯಗೌಡ, ಡಾ.ಎಂ.ಜಿ. ಕೃಷ್ಣಮೂರ್ತಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.