ADVERTISEMENT

ಶಿವಮೊಗ್ಗ: ನಾಳೆ ರಾಮ ಮಂದಿರ ಭೂಮಿ ಪೂಜೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 9:30 IST
Last Updated 3 ಆಗಸ್ಟ್ 2020, 9:30 IST

ಶಿವಮೊಗ್ಗ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆಯ ಸಂಭ್ರಮಕ್ಕೆ ಶಿವಮೊಗ್ಗವೂಸಜ್ಜಾಗಿದೆಎಂದು ವಿಶ್ವಹಿಂದೂಪರಿಷತ್‌ಜಿಲ್ಲಾ ಘಟಕದ ಅಧ್ಯಕ್ಷರಮೇಶ್ ಬಾಬು ಜಾದವ್ ಹೇಳಿದರು.

ಶ್ರೀರಾಮ ಮಂದಿರದ ಕನಸು ಶತಮಾನಗಳ ಹೋರಾಟ. ಸಾವಿರಾರು ಸಾಧುಸಂತರ ಬೇಡಿಕೆ. ಕೊನೆಗೂ ಮಂದಿರದ ನಿರ್ಮಾಣಕ್ಕೆ ಮುಹೂರ್ತ ನಿಶ್ಚಯಿಸಲಾಗಿದೆ. ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರಮೋದಿ ಆರಂಭದ ಪೂಜೆನೆರವೇರಿಸುತ್ತಾರೆ.ಕೋವಿಡ್ ಕಾರಣ ಎಲ್ಲ ರಾಮಭಕ್ತರೂಅಯೋಧ್ಯೆಗೆತೆರಳಲು ಸಾಧ್ಯವಿಲ್ಲ.ಹಾಗಾಗಿ, ವಿಶ್ವಹಿಂದೂಪರಿಷತ್‌ ಕೇಂದ್ರೀಯ ಮಹಾಪ್ರಧಾನ ಕಾರ್ಯದರ್ಶಿ ಮಿಲಿಂದ ಪಾರಂಡೆಅವರು ತಮ್ಮ ಮನೆ,ಮಠ ಮಂದಿರ, ಧಾರ್ಮಿಕ ಕೇಂದ್ರಗಳಲ್ಲಿ ಸರಳವಾಗಿ ಕಾರ್ಯಕ್ರಮಆಯೋಜಿಸಲು ಸೂಚಿಸಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ನಗರದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ 8ಕ್ಕೆಗೆ ಶ್ರೀರಾಮತಾರಕ ಹೋಮ ನಡೆಸಲಾಗುವುದು. 10 ಗಂಟೆಗೆ ಸಣ್ಣ ಸಭಾ ಕಾರ್ಯಕ್ರಮ ಇರುತ್ತದೆ. ಬೀದಿ, ಮನೆ, ಗ್ರಾಮ, ದೇವಾಲಯಗಳಲ್ಲಿ ತಳಿರುತೋರಣಗಳಿಂದ ಅಲಂಕರಿಸಲಾಗುತ್ತಿದೆ.ಭಜನೆ, ಸಂಕೀರ್ತನೆ, ಜಪ, ಪೂಜೆ, ಪುಷ್ಪಾರ್ಚನೆ, ದೂಪ, ದೀಪ, ನೈವೇದ್ಯಗಳಿಂದ ಶ್ರೀರಾಮನನ್ನು ಆರಾಧಿಸಿ ಪ್ರಸಾದ ವಿತರಿಸುವರು ಎಂದರು.

ADVERTISEMENT

ಅಂದು ಬೆಳಿಗ್ಗೆ 10.30ಕ್ಕೆ ದೂರದರ್ಶನದಲ್ಲಿನೇರ ಪ್ರಸಾರ ಇರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆಇಟ್ಟು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದೂಪರಿಷತ್‌ಪದಾಧಿಕಾರಿಗಳಾದ ಚಂದ್ರಕಾಂತ್, ಎಸ್.ಆರ್.ನಟರಾಜ್, ನಾರಾಯಣ ಜಿ.ವರ್ಣೇಕರ್,ಸತೀಶ್, ರಾಜೇಶ ಗೌಡ, ವಿ.ಕೆ.ಜೈನ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.