ADVERTISEMENT

ಭದ್ರಾವತಿಯಲ್ಲಿ ಪುನೀತ್ ರಾಜ್‌ಕುಮಾರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಅಶ್ವಿನಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 4:15 IST
Last Updated 23 ಜನವರಿ 2026, 4:15 IST
<div class="paragraphs"><p>ಭದ್ರಾವತಿಯಲ್ಲಿ ಪುನೀತ್ ರಾಜ್‌ಕುಮಾರ್ ಕಂಚಿನ ಪುತ್ಥಳಿ ಮತ್ತು ದೇಗುಲವನ್ನು ಲೋಕಾರ್ಪಣೆ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಿದರು</p></div>

ಭದ್ರಾವತಿಯಲ್ಲಿ ಪುನೀತ್ ರಾಜ್‌ಕುಮಾರ್ ಕಂಚಿನ ಪುತ್ಥಳಿ ಮತ್ತು ದೇಗುಲವನ್ನು ಲೋಕಾರ್ಪಣೆ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಿದರು

   

ಭದ್ರಾವತಿ: ನಿಮ್ಮೆಲ್ಲರ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಮತ್ತು ರಾಜಕುಮಾರ್ ಕುಟುಂಬ ಸದಾ ಆಭಾರಿಯಾಗಿದ್ದೇವೆ” ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಿಳಿಸಿದರು.

ಅವರು ಗುರುವಾರ ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅಭಿಮಾನಿ ಸಂಘದ ವತಿಯಿಂದ ಪ್ರತಿಷ್ಠಾಪಿಸಿದ 3 ಅಡಿ ಎತ್ತರದ ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪುತ್ಥಳಿ ಮತ್ತು ದೇಗುಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ADVERTISEMENT

ಇದೇ ವೇಳೆ ತಾಲ್ಲೂಕು ಕಚೇರಿ ರಸ್ತೆಗೆ ‘ಡಾ.ಪುನೀತ್ ರಾಜಕುಮಾರ್ ರಸ್ತೆ’ ಎಂದು ನಾಮಕರಣದ ನಾಮಫಲಕ ಹಾಗೂ ಕನಕ ಆಟೋ ಚಾಲಕರ ಸಂಘದಿಂದ ನಿರ್ಮಿಸಲಾದ ಪುನೀತ್ ರಾಜಕುಮಾರ್ ಪುತ್ಥಳಿಯನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಕೆ.ಆರ್.ಐ.ಡಿ.ಎಲ್. ಅಧ್ಯಕ್ಷ ಬಿ.ಕೆ. ಸಂಗಮೇಶ್ವರ, ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್. ಗಣೇಶ್, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಬಿ.ಕೆ. ಮೋಹನ್, ಎಸ್. ಕುಮಾರ್, ಶ್ರೀಕಾಂತ್, ಜಾರ್ಜ್, ಮಣಿ, ನಗರಸಭೆ ಆಯುಕ್ತ ಹೇಮಂತ್, ಬಿ.ವಿ. ಶ್ರೀನಿವಾಸ್, ಕೆ. ಚೇತನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.