ADVERTISEMENT

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರಗ ಜ್ಞಾನೇಂದ್ರ ಆಪ್ತಸಹಾಯಕನ ಬಂಧನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:57 IST
Last Updated 12 ಫೆಬ್ರುವರಿ 2026, 23:57 IST
ರಾಜೇಶ್ ಹಿರೇಮನೆ
ರಾಜೇಶ್ ಹಿರೇಮನೆ   

ಹೊಸನಗರ (ಶಿವಮೊಗ್ಗ): ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ಬಂಧನಕ್ಕೆ ಒಳಗಾಗಿದ್ದಾರೆ.

​ಮಳಲಿ ಗ್ರಾಮದ ನಿವಾಸಿ, ರಾಜೇಶ್ ಹಿರೇಮನೆ ಬಂಧಿತ. ಬುಧವಾರ ಮಧ್ಯಾಹ್ನ ಬಂಧನಕ್ಕೆ ಒಳಗಾಗಿದ್ದ ಇವರಿಗೆ ಗುರುವಾರ ಜಾಮೀನು ದೊರೆತಿದೆ. 

ಆರೋಪಿಯು ರಾಹುಲ್ ಗಾಂಧಿಯವರ ಮುಖದ ಅರ್ಧ ಭಾಗ ಹಾಗೂ ಪಾಕಿಸ್ತಾನ ಸೇನಾಧಿಕಾರಿ ಮುಖದ ಅರ್ಧ ಭಾಗವಿರುವ ಫೋಟೊ ಎಡಿಟ್ ಮಾಡಿ ಸೇರಿಸಿ, ‘ಒನ್ ಅಜೆಂಡಾ’ ಎಂಬ ಟ್ಯಾಗ್‌ಲೈನ್ ಅಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ADVERTISEMENT

​ಈ ಕುರಿತಂತೆ 2025ರ ಮೇ 20ರಂದು ನಗರ ಠಾಣೆ ಪೊಲೀಸರು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 353 (2) ರ ಅಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೊಸನಗರ ಜೆ.ಎಂ.ಎಫ್.ಸಿ ಕೋರ್ಟ್‌ನ ನ್ಯಾಯಾಧೀಶರು ಆರೋಪಿ ಬಂಧಿಸಲು ಆದೇಶ ನೀಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.