ಭದ್ರಾವತಿ: ಬಿಜೆಪಿ ಮಂಡಲ ವತಿಯಿಂದ ಭಾನುವಾರ ಪಕ್ಷದ ಸಂಸ್ಥಾಪನ ದಿನ ಮತ್ತು ರಾಮನವಮಿ ಆಚರಿಸಲಾಯಿತು.
ಶಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಅವರು ಹಾಕಿಕೊಟ್ಟ ಮಾರ್ಗಗಳಾದ ರಾಷ್ಟ್ರೀಯತೆ, ದೇಶ, ಧರ್ಮದ ಆದರ್ಶಗಳನ್ನು ಪಾಲಿಸುತ್ತ ಪಕ್ಷವನ್ನು ಸದೃಢಗೊಳಿಸೋಣ ಎಂದು ಮಂಡಲ ಅಧ್ಯಕ್ಷ ಧರ್ಮ ಪ್ರಸಾದ್ ಜಿ. ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರೇ ಪಕ್ಷದ ಜೀವಾಳ ಎಂದರು.
ಪಕ್ಷದ ಧ್ವಜಾರೋಹಣದ ಬಳಿಕ ರಾಮನಿಗೆ ಪುಷ್ಪಾರ್ಚನೆ ಮಾಡಲಾಯಿತು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್, ಮೊಸರಹಳ್ಳಿ ಅಣ್ಣಪ್ಪ, ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ಎಂ. ಮಂಜುನಾಥ್, ತೀರ್ಥಯ್ಯ, ಕಾರ ನಾಗರಾಜ್, ಬಿ.ಜಿ ರಾಮಲಿಂಗಯ್ಯ, ಸರಸ್ವತಿ, ಧನುಷ್ ಬೋಸ್ಲೆ, ರಾಜಶೇಖರ್, ಸತೀಶ್ ಹಾಗೂ ಇತರರು ಉಪರಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.