ಪ್ರಜಾವಾಣಿ ವಾರ್ತೆ
ಶಿಕಾರಿಪುರ: ಬೀದರ್‌ನಿಂದ ಬೆಂಗಳೂರುವರೆಗೆ ಸಂಚರಿಸಲಿರುವ ‘ಗೋರ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ ಜನ ಜಾಗೃತಿ ಸೇವಾ ರಥಯಾತ್ರೆ’ ಶನಿವಾರ ತಾಲ್ಲೂಕಿಗೆ ಆಗಮಿಸಲಿದ್ದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಬಂಜಾರ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರನಾಯ್ಕ ತಿಳಿಸಿದರು.
ರಥಯಾತ್ರೆ ಬಳೂರು ಗ್ರಾಮದ ಮೂಲಕ ತಾಲ್ಲೂಕು ಪ್ರವೇಶಿಸಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶಿವಮೊಗ್ಗಕ್ಕೆ ಬೀಳ್ಕೊಡುಗೆ ನೀಡಲಾಗುವುದು. ಮಾರ್ಚ್ 10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ ನಡೆಯಲಿದೆ ಎಂದು ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗೋರ್‌ಸೇನಾ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರನಾಯ್ಕ ಮಾತನಾಡಿ, ‘ಬಂಜಾರ ಸಮುದಾಯದಿಂದ ಆಯೋಜಿಸಿರುವ ಮೊದಲ ರಥಯಾತ್ರೆ ಇದು. ರಾಜ್ಯದ 15 ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದೆ. ಸಮುದಾಯದವರಲ್ಲಿ ಈಗಲೂ ಬೇರು ಬಿಟ್ಟಿರುವ ಮೂಢನಂಬಿಕೆಯನ್ನು ಹೋಗಲಾಡಿಸಬೇಕು. ಶಿಕ್ಷಣ, ವ್ಯಾಪಾರದ ಮೂಲಕ ಸಮುದಾಯವು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ಯಾತ್ರೆ ನಡೆಸಲಾಗುತ್ತಿದೆ ಎಂದರು.
ಬಂಜಾರ ಸಮುದಾಯದ ಮುಖಂಡರಾದ ಮಂಜುನಾಯ್ಕ, ಜಗದೀಶನಾಯ್ಕ, ವಿಜಯನಾಯ್ಕ, ಆನಂದನಾಯ್ಕ, ಸೋಮುನಾಯ್ಕ, ಕಿರಣನಾಯ್ಕ, ಪವನನಾಯ್ಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.