ADVERTISEMENT

ಗಣೇಶೋತ್ಸವ: ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ: ಎ.ಜಿ. ಕಾರ್ಯಪ್ಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 6:00 IST
Last Updated 22 ಆಗಸ್ಟ್ 2025, 6:00 IST
ರಿಪ್ಪನ್ ಪೇಟೆಯಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ನಡೆದ ನಾಗರೀಕರ ಶಾಂತಿ ಸಭೆಯಲ್ಲಿ ಎ ಎಸ್ ಪಿ ಕಾರ್ಯಪ್ಪ ಏಜಿ
ರಿಪ್ಪನ್ ಪೇಟೆಯಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ನಡೆದ ನಾಗರೀಕರ ಶಾಂತಿ ಸಭೆಯಲ್ಲಿ ಎ ಎಸ್ ಪಿ ಕಾರ್ಯಪ್ಪ ಏಜಿ   

ರಿಪ್ಪನ್‌ಪೇಟೆ: ‘ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಧಾರ್ಮಿಕ ಹಬ್ಬಹರಿದಿನದ ಆಚರಣೆಗಳು ಭಾವೈಕ್ಯದ ಸಂಕೇತವಾಗಿವೆ’ ಎಂದು ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಕಾರ್ಯಪ್ಪ ಹೇಳಿದರು.

ಪಟ್ಟಣದ ಶಿವಮಂದಿರದಲ್ಲಿ ಪೊಲೀಸ್ ಇಲಾಖೆ ಗುರುವಾರ ಆಯೋಜಿಸಿದ್ದ ನಾಗರಿಕ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

‘ಗೌರಿ– ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಶಾಂತಿ ಸೌಹಾರ್ದದ ಪ್ರತೀಕವಾಗಿವೆ. ಅಂತಹ ಸಂದರ್ಭದಲ್ಲಿ ಕೆಲವು ದುಷ್ಟ ಶಕ್ತಿಗಳು ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡಿದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ರಕ್ಷಣಾ ಇಲಾಖೆ ಕ್ರಮ ಕೈಗೊಳ್ಳಲಿದೆ’ ಎಂದು ಎಚ್ಚರಿಸಿದರು.

ADVERTISEMENT

ತಹಶೀಲ್ದಾರ್‌ ರಶ್ಮಿ ಹಾಲೇಶ್ ಮಾತನಾಡಿದರು. ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ಪ್ರಸ್ತಾವಿಕವಾಗಿ ಮಾತನಾಡಿದರು.

ಸಿಪಿಐ ಗುರಣ್ಣ ಹೆಬ್ಬಾಳ, ತೀರ್ಥಹಳ್ಳಿ ಸಿಪಿಐ ಇಮ್ರಾನ್ ಬೇಗಂ, ಪಿಎಸ್ಐ ರಾಜುರೆಡ್ಡಿ, ಅಬಕಾರಿ ಇಲಾಖೆಯ ಪಿಎಸ್ಐ ನಾಗರಾಜ್ ಕೆ.ಎಂ, ಅಗ್ನಿಶಾಮಕ ದಳದ ಗೋಪಾಲ್, ಮೆಸ್ಕಾಂ ಇಲಾಖೆಯ ಸಹಾಯಕ ಎಂಜಿನಿಯರ್ ಕೃಷ್ಣ ಬಿ.ಎಂ. ಅರಸಾಳು, ಆರ್‌ಎಫ್ಒ  ಶರಣಯ್ಯ ಮಾತನಾಡಿದರು.

ಕೆರೆಹಳ್ಳಿ ಹಾಗೂ ಹುಂಚ ಹೋಬಳಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಗಣಪತಿ ಸೇವಾ ಸಮಿತಿ ಹಾಗೂ ಈದ್ ಮಿಲಾದ್ ಸೇವಾ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು, ಸಮಾಜದ ಹಿರಿಯ ಮುಖಂಡರು ಮತ್ತು ನಾಗರಿಕರು ಭಾಗಿಯಾಗಿದ್ದರು.

ರಿಪ್ಪನ್ ಪೇಟೆ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ನಡೆದ ನಾಗರಿಕರ ಶಾಂತಿ ಸಭೆಯಲ್ಲಿ ಎ ಎಸ್ ಪಿ ಕಾರ್ಯಪ್ಪ ಎ ಜಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.