ADVERTISEMENT

ಸಾಗರ: ‘ಮಲ್ನಾಡ್ ಯಾನ’ ವಿಡಿಯೊ ಆಲ್ಬಂ ಬಿಡುಗಡೆ ಜೂನ್ 20ಕ್ಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:22 IST
Last Updated 19 ಜೂನ್ 2025, 14:22 IST
‘ಮಲ್ನಾಡ್ ಯಾನ’ ವಿಡಿಯೊ ಆಲ್ಬಂ 
‘ಮಲ್ನಾಡ್ ಯಾನ’ ವಿಡಿಯೊ ಆಲ್ಬಂ    

ಸಾಗರ: ಮಲೆನಾಡಿನ ಪರಿಸರದ ವಿಶೇಷತೆ, ಮಳೆಯ ವೈಭವ ಮೊದಲಾದ ಸಂಗತಿಗಳನ್ನು ಒಳಗೊಂಡಿರುವ ಕನ್ನಡ ವಿಡಿಯೊ ಆಲ್ಬಂ ‘ಮಲ್ನಾಡ್‌ ಯಾನ’ ಜೂನ್ 20ರಂದು ಸಂಜೆ 7ಕ್ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ರಂಗ ನಟ ಸಂತೋಷ್ ಸದ್ಗುರು ತಿಳಿಸಿದರು.

ಮಲೆನಾಡಿನ ತೋಟ, ಗದ್ದೆ, ಕೆರೆಕಟ್ಟೆ, ಜಲಪಾತ, ಕಾಡು, ಗ್ರಾಮೀಣ ಸೊಗಡಿನ ವಿವರಗಳನ್ನು ದೃಶ್ಯ ವೈಭವದ ಮೂಲಕ ಈ ಆಲ್ಬಂನಲ್ಲಿ ಕಟ್ಟಿಕೊಡಲಾಗಿದೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ವಿಡಿಯೊ ಆಲ್ಬಂ ಗೀತೆಯನ್ನು ಯು.ಎಂ.ಮಂಜುನಾಥ್ ರಚಿಸಿದ್ದಾರೆ. ಮಿತ್ರಾ ಹೆಗಡೆ ಹಾಡಿದ್ದಾರೆ. ರಘೋತ್ತಮ ಸಂಗೀತ ಸಂಯೋಜಿಸಿದ್ದಾರೆ. ಸುಮಂತ ಶರ್ಮ ಮತ್ತು ಶಂಕರ ತಾಳಗುಪ್ಪ ಛಾಯಾಗ್ರಹಣ ಮಾಡಿದ್ಲಾರೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.