
ಪ್ರಜಾವಾಣಿ ವಾರ್ತೆ
ಸಾಗರ: ತಾಲ್ಲೂಕಿನ ಇಡುವಾಣಿ ಗ್ರಾಮದ ಬಳಿ ಕೆಎಸ್ಆರ್‌ಟಿಸಿ ಬಸ್ ಹಾಗೂ ನಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ವಾಹನದ ನಡುವೆ ಗುರುವಾರ ಮುಖಾಮುಖಿ ಡಿಕ್ಕಿಯಾಗಿದ್ದು ಎರಡೂ ಬಸ್‌ಗಳ ಚಾಲಕರು , ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಸಾಗರದಿಂದ ಕಾರ್ಗಲ್ ಕಡೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಕಾರ್ಗಲ್‌ನಿಂದ ಸಾಗರಕ್ಕೆ ಬರುತ್ತಿದ್ದ ಶಾಲಾ ವಾಹನದ ನಡುವೆ ಈ ಅಪಘಾತ ಸಂಭವಿಸಿದೆ.
ಶಾಲಾ ವಾಹನದ ಬಸ್ ಚಾಲಕ ಪ್ರವೀಣ್, ಸರ್ಕಾರಿ ಬಸ್ ಚಾಲಕ ಆರೀಫ್, ವಿದ್ಯಾರ್ಥಿ ಸಾತ್ವಿಕ್ ಅವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.