
ಸಂಗೀತೋತ್ಸವ
ಸಾಗರ: ಇಲ್ಲಿನ ಲಯಾಂಕುರ ಟ್ರಸ್ಟ್, ನಾ ಧಿನ್ ಧಿನ್ ನಾ ಹಿಂದೂಸ್ತಾನಿ ತಬಲಾ ವಿದ್ಯಾಲಯದ ವತಿಯಿಂದ ಡಿ.21 ರಂದು ಬೆಳಿಗ್ಗೆ 8.30 ರಿಂದ ಅಜಿತ್ ಸಭಾಭವನದಲ್ಲಿ ಲಯವತ್ಸರ–4 ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಿಗ್ಗೆ 8.30ಕ್ಕೆ ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪಂಡಿತ್ ಭಾಸ್ಕರ ವಿ. ಹೆಗಡೆ ಮುತ್ತಿಗೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಲಯಾಂಕುರ ಟ್ರಸ್ಟ್ ನ ಪ್ರಮುಖರಾದ ನಿಖಿಲ್ ಕುಂಸಿ ತಿಳಿಸಿದ್ದಾರೆ.
ಬೆಳಿಗ್ಗೆ 9ಕ್ಕೆ ಹಿಂದೂಸ್ತಾನಿ ಮತ್ತು ಬಾನ್ಸುರಿ ಜುಗಲ್ ಬಂದಿ ‘ಗಾನ ವೇಣು ಸುಧೆ’ ನಡೆಯಲಿದ್ದು, ಗಾಯನದಲ್ಲಿ ವಿದುಷಿ ಶ್ರೀರಂಜನಿ ಹಿಳ್ಳೋಡಿ, ಬಾನ್ಸುರಿ ವಾದನಲ್ಲಿ ಸುಭೋದ್ ಪಿ.ರಾವ್, ತಬಲಾದಲ್ಲಿ ವಿನಾಯಕ ಸಾಗರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
10.30ಕ್ಕೆ ಕರ್ನಾಟಕಿ ಪಿಟೀಲು, ಹಿಂದೂಸ್ತಾನಿ ಸಾರಂಗಿ ಜುಗಲ್ ಬಂದಿಯ ‘ವಾದ್ಯ ನಾದ ಸುಧೆ’ ನಡೆಯಲಿದ್ದು, ವಿದ್ವಾನ್ ಆರ್. ಅಚ್ಯುತ್ ರಾವ್ ಪಿಟೀಲು ವಾದನಲ್ಲಿ, ಪ್ರೊ.ದೀಪಕ್ ಪರಮಶಿವನ್ ಸಾರಂಗಿ ವಾದನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
5.30ಕ್ಕೆ ಧಾರವಾಡದ ಹೇಮಂತ್ ಜೋಷಿ ಅವರಿಂದ ತಬಲಾ ಸೋಲೊ ಕಾರ್ಯಕ್ರಮವಿದ್ದು ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗಾಯಕ ಉಸ್ತಾದ್ ಹುಮಾಯನ್ ಹರ್ಲಾಪುರ ಹಾಗೂ ತಬಲಾ ವಾದಕ ಮಡಿವಾಳಯ್ಯ ಸಾಲಿ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 8ಕ್ಕೆ ಕೃಷ್ಣೇಂದ್ರ ವಾಡಿಕರ್ ಹುಬ್ಬಳ್ಳಿ ಅವರಿಂದ ಹಿಂದೂಸ್ತಾನಿ ಗಾಯನ ಏರ್ಪಡಿಸಲಾಗಿದೆ ಎಂದರು.
ಪ್ರಮುಖರಾದ ಭಾಸ್ಕರ ವಿ.ಹೆಗಡೆ, ವಿಜಯೇಂದ್ರ ಕುಂಸಿ, ಮಹಾಬಲೇಶ್ವರ, ಕಿರಣ್, ನಾಗರಾಜ್ ಕೆ. ಸ್ವಸ್ತಿಕ್, ಮನಸ್ವಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.