ADVERTISEMENT

ಶಿವಮೊಗ್ಗ: ದುಬೈನಿಂದ ವಾಟ್ಸ್‌ಆ್ಯಪ್‌ನಲ್ಲೇ ಪತ್ನಿಗೆ ತಲಾಕ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 14:57 IST
Last Updated 18 ಸೆಪ್ಟೆಂಬರ್ 2019, 14:57 IST
ಮುಸ್ತಾಫಾ ಬೇಗ್
ಮುಸ್ತಾಫಾ ಬೇಗ್   

ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿ, 20 ವರ್ಷಗಳು ಸಂಸಾರ ಮಾಡಿದ ಪತಿ ದೂರದ ದುಬೈನಿಂದಲೇ ವಾಟ್ಸ್‌ಆ್ಯಪ್‌ ಮೂಲಕ ಶಿವಮೊಗ್ಗದಲ್ಲಿರುವ ಪತ್ನಿಗೆ ತಲಾಕ್‌ ನೀಡಿದ್ದಾರೆ.

ಟ್ಯಾಂಕ್‌ ಮೊಹಲ್ಲಾದ ಮುಸ್ತಾಫಾ ಬೇಗ್ ವಾಟ್ಸ್‌ಆ್ಯಪ್‌ನಲ್ಲೇ ಮೂರು ಬಾರಿ ತಲಾಕ್ ಹೇಳಿದವರು. ಅದೇ ಬಡಾವಣೆಯ ಯುವತಿಯನ್ನು ಎರಡು ದಶಕದ ಹಿಂದೆ ಮದುವೆಯಾಗಿದ್ದರು. ನಂತರ ಲ್ಯಾಪ್‌ಟಾಪ್, ಸಿಸಿಟಿವಿ ಟೆಕ್ನೀಷಿಯನ್‌ ಕೆಲಸಕ್ಕೆ ದುಬೈಗೆ ತೆರಳಿದ್ದರು.

ವರ್ಷಕ್ಕೆ ಎರಡು ಬಾರಿ ಇಲ್ಲಿಗೆ ಬಂದು ಪತ್ನಿ, ಮಗಳ ಜತೆ ಇರುತ್ತಿದ್ದರು. ಪ್ರತಿ ತಿಂಗಳು ₨ 13 ಸಾವಿರ ಕಳುಹಿಸಿಕೊಡುತ್ತಿದ್ದರು. ಈ ವರ್ಷದ ಜನವರಿಯಲ್ಲಿ ದುಬೈಗೆ ಹೋಗಿದ್ದ ಅವರು ಕೆಲವು ದಿನಗಳ ಹಿಂದೆ ತಲಾಕ್‌ ನೀಡಿದ್ದಾರೆ. ಭಾರತದಲ್ಲಿ ತಲಾಕ್ ನಿಷೇಧಿಸಿರುವ ಕಾರಣ ಮಹಿಳೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಬುಧವಾರ ಅಧಿಕೃತ ದೂರು ದಾಖಲಾಗಿದೆ.

ADVERTISEMENT

‘ಅವರು ನೀಡಿರುವ ತಲಾಕ್ ಸ್ವೀಕರಿಸುವುದಿಲ್ಲ. ಪತಿಯ ಜತೆ ಬದುಕು ನಡೆಸುತ್ತೇನೆ’ ಎಂದು ಮಹಿಳೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.