
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ಶಿವಮೊಗ್ಗ: ಮಾಗಿಯ ಥಂಡಿಯ ನಡುವೆ ಶಿವಮೊಗ್ಗ ಸುತ್ತಮುತ್ತ ಭಾನುವಾರ ಸಂಜೆ ಕೊಂಚ ಮಳೆ ಹನಿಯಿತು. ಶಿವಮೊಗ್ಗದಿಂದ ಆಯನೂರುವರೆಗೆ ನೆಲ ಹಸಿಯಾಗುವಷ್ಟು ಮಳೆ ಬಂದಿತು.
ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಇಡೀ ದಿನ ಸೂರ್ಯನ ದರ್ಶನ ಆಗಲಿಲ್ಲ. ಬೆಳಿಗ್ಗೆ 9ರವರೆಗೆ ಮಂಜು ಮುಸುಕಿದ್ದು, ಚಳಿ ಹೆಚ್ಚಿತ್ತು. ಸಂಜೆ ಕೂಡ ಶೀತ ಎಂದಿಗಿಂತ ಹೆಚ್ಚಾಗಿಯೇ ಇತ್ತು. ಈ ವೈಪರೀತ್ಯವನ್ನು ವಾರಾಂತ್ಯದ ರಜೆಯ ವಿಶ್ರಾಂತಿಗೆ ಜನರು ಬಳಸಿಕೊಂಡ ಕಾರಣ ಇಡೀ ದಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಇತ್ತು.