ADVERTISEMENT

ಶಿವಮೊಗ್ಗ: 'ಮಹಾರಾಷ್ಟ್ರಕ್ಕೆ ಸೀಮಿತಗೊಂಡ ಶಿವಾಜಿ'

ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ವಿನಯ್ ಜಾದವ್ ವಿಷಾದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 5:40 IST
Last Updated 20 ಫೆಬ್ರುವರಿ 2023, 5:40 IST
ಶಿವಮೊಗ್ಗದ ಕುವೆಂಪು ರಂಗಮಂದಿರಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿಯನ್ನು ಕ್ಷತ್ರೀಯ ಮರಾಠ ಕ್ಷೇಮಾಭಿವೃದ್ಧಿ ಸಂಘದವರು ಶಿವಾಜಿ ಭಾವ ಚಿತ್ರ ಹಿಡಿದು ನಗರದ ವಿವಿಧ ಬೀದಿಯಲ್ಲಿ ಮೆರವಣಿಗೆ ನಡೆಸಿದು.
ಶಿವಮೊಗ್ಗದ ಕುವೆಂಪು ರಂಗಮಂದಿರಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿಯನ್ನು ಕ್ಷತ್ರೀಯ ಮರಾಠ ಕ್ಷೇಮಾಭಿವೃದ್ಧಿ ಸಂಘದವರು ಶಿವಾಜಿ ಭಾವ ಚಿತ್ರ ಹಿಡಿದು ನಗರದ ವಿವಿಧ ಬೀದಿಯಲ್ಲಿ ಮೆರವಣಿಗೆ ನಡೆಸಿದು.   

ಶಿವಮೊಗ್ಗ: ‘ಛತ್ರಪತಿ ಶಿವಾಜಿ ಕೇವಲ ರಾಜನಾಗಿ ಮೆರೆಯಲಿಲ್ಲ. ಆದರೆ, ರಾಜನನ್ನು ವಿವಾದಾತ್ಮಕ ವ್ಯಕ್ತಿಯಾಗಿ ಚಿತ್ರಿಸಿ, ಮಹಾರಾಷ್ಟ್ರಕ್ಕೆ ಸೀಮಿತ ಗೊಳಿಸಲಾಗಿದೆ’ ಎಂದು ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿನಯ್ ಜಾದವ್ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ವರು ಉಪನ್ಯಾಸ ನೀಡಿದರು.

‘ಶಿವಾಜಿಯು ಮೊಘಲರ ಮೇಲೆ ದಾಳಿ ನಡೆಸಿ ಯಾವುದೇ ಧಾರ್ಮಿಕ ಕೇಂದ್ರವನ್ನು ನಾಶ ಪಡಿಸಲು ಮುಂದಾಗಿರಲಿಲ್ಲ. ಆತ ದಾಳಿ ನಡೆಸಿದ್ದು ಕೇವಲ ಮೊಘಲರ ಮೇಲೆ. ಮೊಘಲರು ನಡೆಸುತ್ತಿದ್ದ ದಾಳಿಯನ್ನು ಖಂಡಿಸಿ ಶಿವಾಜಿ ಪ್ರತಿದಾಳಿ ನಡೆಸುತ್ತಿದ್ದ ಅಷ್ಟೇ. ಆದರೆ, ಮೊಘಲರು ದಾಳಿ ನಡೆಸಿದಾಗ 40,000 ದೇವಾಲಯಗಳು ಧ್ವಂಸ ಮಾಡಿದ್ದರ ಬಗ್ಗೆ ಉಲ್ಲೇಖವಿದೆ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ ಅನೇಕ ಸಾಮಂತ ರಾಜರು ಆಡಳಿತ ನಡೆಸಿದ್ದಾರೆ. ದೇಶದೆಲ್ಲೆಡೆ ಸಿಗುವ ಪವಾಡ ಪುರುಷನ ಪುತ್ಥಳಿ ಎಂದರೆ ಅದು ಶಿವಾಜಿ ರಾಜನದ್ದು. ಆತ ಕೇವಲ ಮರಾಠ ರಾಜ್ಯ ಕಟ್ಟಲು ಹೋಗಿರಲಿಲ್ಲ. ಹಿಂದೂವೀ ಸಾಮ್ರಾಜ್ಯದ ಕಲ್ಪನೆ ಹೊಂದಿದ್ದನು. ಶಿವಾಜಿ ಜಯಂತಿ ಒಂದು ದಿನಕ್ಕೆ ಸೀಮಿತಾಗಬಾರದು. ಕರ್ನಾಟಕದಲ್ಲಿ ಅಧ್ಯಯನ ಪೀಠ ಆರಂಭಿಸಬೇಕು’ ಎಂದರು.

‘ಶಿವಾಜಿ ಮಹಾರಾಷ್ಟ್ರಕ್ಜೆ ಸೇರಿದವನು ಎಂದು ಹೇಳಲಾಗುತ್ತಿದೆ. ಕೆಳದಿ ಚೆನ್ನಮ್ಮ ಮತ್ತು ಶಿವಾಜಿಯ ನಡುವೆ ಅವಿನಾಭಾವ ಸಂಬಂಧವಿದೆ. ಶಿವಾಜಿಯ ಮಗ ರಾಜಾರಾಮ್ ಅವರಿಗೆ ಬಿದನೂರಿನಲ್ಲಿ ಆಶ್ರಯ ಕೊಡಲಾಗಿತ್ತು. ಈ ನೆಲದ ಮಣ್ಣಿನ ರಕ್ಷಣೆಗೆ ಕೆಳದಿ ಚೆನ್ನಮ್ಮ ಮತ್ತು ಶಿವಾಜಿಯು ಹೋರಾಡಿದರು’ ಎಂದು ಹೇಳಿದರು.

ತಹಶೀಲ್ದಾರ್ ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್, ಕ್ಷತ್ರಿಯ ಮರಾಠ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಾನಾಜಿ ಬೋಸ್ಲೆ, ದೇವರಾಜ್ ಸಿಂಧೆ ಎಂ.ಡಿ, ಬಿ.ಕೆ. ದಿನೇಶ್ ರಾವ್ ಚವ್ಹಾಣ್, ಎನ್.ಜಿ. ನಾಗರಾಜ್, ರಮೇಶ್ ಬಾಬು ಜಾದವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.