ಸೊರಬ: ತಾಲ್ಲೂಕಿನ ಚಂದ್ರಗುತ್ತಿ ದೇವಾಲಯದ ಕೋಟೆಯಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯ ದ್ವಾರವಿರುವ ಮುಸುಕಿನ ಬಾವಿ ಪತ್ತೆಯಾಗಿದೆ.
ಚಂದ್ರಗುತ್ತಿಯ ಕೆಲ ಯುವಕರ ತಂಡವು ಕೋಟೆ ಅನ್ವೇಷಣೆ ಕೈಗೊಂಡಿದ್ದ ವೇಳೆ ಈ ಕಲಾತ್ಮಕ ಇಳಿ ಬಾವಿ ಗೋಚರಿಸಿದೆ. ಈ ಶೈಲಿಯ ದ್ವಾರವನ್ನು ಹೊಂದಿರುವ ಬಾವಿಗೆ ಮಾರ್ಗದರ್ಶನವಿಲ್ಲದೆ ತೆರಳುವುದು ಕಷ್ಟ. ಬಾವಿಯಲ್ಲಿ ನೀರಿದ್ದು, ಮೇಲ್ಮೈ ಸುತ್ತ ಮಂಟಪದ ರಚನೆ ಇದೆ. ಇಳಿಯಲು ಮೆಟ್ಟಿಲುಗಳು ಇವೆ.
ಚಂದ್ರಗುತ್ತಿ ಅದಿದೇವತೆ ರೇಣುಕಾಂಬಾ ದೇವಿಗೆ ಸಾವಿರಾರು ಭಕ್ತರು ಇದ್ದಾರೆ. ಪ್ರತಿವರ್ಷ ಕೋಟ್ಯಂತರ ರೂಪಾಯಿ ಆದಾಯ ತರುವ ಕ್ಷೇತ್ರ ಇದಾಗಿದೆ. ಆದರೂ ಚಂದ್ರಗುತ್ತಿ ಅಭಿವೃದ್ಧಿಗೆ ಯಾರೂ ಗಮನ ಹರಿಸುತ್ತಿಲ್ಲ. ಕೋಟೆ, ದೇಗುಲಗಳ ರಕ್ಷಣೆಯೂ ಇಲ್ಲ. ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸ್ಥಳೀಯರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.