ADVERTISEMENT

ಕುಂದು ಕೊರತೆ | ಶಿವಮೊಗ್ಗ: ರಸ್ತೆ ನಿರ್ಮಿಸಿ ವಿದ್ಯಾರ್ಥಿನಿಯರ ಸಮಸ್ಯೆ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:26 IST
Last Updated 10 ಜುಲೈ 2025, 4:26 IST
ಶಿಕಾರಿಪುರದ ಚನ್ನಕೇಶವ ನಗರದಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ರಸ್ತೆಯ ಸ್ಥಿತಿಯಿದು
ಶಿಕಾರಿಪುರದ ಚನ್ನಕೇಶವ ನಗರದಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ರಸ್ತೆಯ ಸ್ಥಿತಿಯಿದು   

ಶಿಕಾರಿಪುರ: ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ಮುಂದೆ ಸಾಗುವುದು ಬಹಳ ಕಷ್ಟವಾಗಿದೆ. 

ರಸ್ತೆಯ ಉದ್ದಕ್ಕೂ ದೊಡ್ಡ ಕಲ್ಲುಗಳನ್ನು ಇಟ್ಟುಕೊಂಡು ಅದರ ಮೇಲೆಯೇ ಕಾಲಿಟ್ಟು ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳುತ್ತಿದ್ದಾರೆ. ವಿದ್ಯಾರ್ಥಿನಿಯರು ಹಲವು ಬಾರಿ ಕಾಲು ಜಾರಿ ಬಿದ್ದು ಶಾಲೆಗೆ ಹೋಗದಂತೆ ಆಗಿರುವ ಘಟನೆಯೂ ನಡೆದಿದೆ.

ಹಾಸ್ಟೆಲ್ ಪಕ್ಕದ ರಸ್ತೆಯಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್‌ ಪೂರ್ವ ಬಾಲಕಿಯರು ವಿದ್ಯಾರ್ಥಿನಿಯರ ಹಾಸ್ಟೆಲ್ ಇದ್ದು ಅಲ್ಲಿಯ ರಸ್ತೆಯೂ ನೀರಿನ ಗುಂಡಿಗಳಿಂದ ತುಂಬಿದೆ ಸ್ವಲ್ಪ ದೂರದಲ್ಲೇ ಡಾಂಬರ್ ರಸ್ತೆ ಇರುವುದರಿಂದ ಸ್ವಲ್ಪ ನಿರಾಳವಾಗಿದ್ದಾರೆ.

ADVERTISEMENT

ಈ ಎರಡೂ ಹಾಸ್ಟೆಲ್ ಸುತ್ತಲೂ ಗಿಡಗಂಟಿ ತುಂಬಿದ್ದು ಸೊಳ್ಳೆ ಕಾಟ ಹೆಚ್ಚಾಗಿದೆ. ಕ್ರಿಮಿ–ಕೀಟಗಳು, ವಿಷಜಂತುಗಳು ಕಂಡು ಬರುತ್ತಿದ್ದು ಸುತ್ತಲಿನ ಪರಿಸರ ಸ್ವಚ್ಛಗೊಳಿಸಬೇಕು ಎನ್ನುವುದು ಇಲ್ಲಿನ ವಿದ್ಯಾರ್ಥಿಗಳು, ನಿವಾಸಿಗಳ ಆಗ್ರಹವಾಗಿದೆ.

-ಮಂಜುನಾಥ್, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.