ADVERTISEMENT

ಶಿವಮೊಗ್ಗ: ರೈಲು ಎಂಜಿನ್, ಬೋಗಿ ನಡುವೆ ಸಂಪರ್ಕ ಕಡಿತ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 27 ಮೇ 2023, 6:41 IST
Last Updated 27 ಮೇ 2023, 6:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಕಡದಕಟ್ಟೆ ಪ್ರದೇಶದ ಕ್ರಾಸಿಂಗ್ ಸಮೀಪದ ಬಿಳಕಿ ಬಳಿ ಚಲಿಸುತ್ತಿದ್ದ ರೈಲಿನ ಎಂಜಿನ್ ತಾಂತ್ರಿಕದೋಷದಿಂದ ಬೇರ್ಪಟ್ಟ ಘಟನೆ ಶುಕ್ರವಾರ ನಡೆದಿದೆ. ಯಾವುದೇ ಅಪಾಯ ಸಂಭವಿಸಿಲ್ಲ.

ತಾಳಗುಪ್ಪ–ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಎಂಜಿನ್ ಮತ್ತು ಬೋಗಿಗಳ ನಡುವಿನ ಸಂಪರ್ಕ ತಪ್ಪಿತ್ತು. ಬೋಗಿಯನ್ನು ಬಿಟ್ಟು ಎಂಜಿನ್ ಮುಂದಕ್ಕೆ ಚಲಿಸಿತ್ತು.

ಶಿವಮೊಗ್ಗದಿಂದ ಬೆಂಗಳೂರಿನತ್ತ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಸ್ವಲ್ಪ ದೂರ ಕ್ರಮಿಸಿದ ನಂತರ ಲೋಕೋ ಪೈಲೆಟ್ ಸಿಬ್ಬಂದಿ ಗಮನಿಸಿ ರೈಲು ನಿಲ್ಲಿಸಿದ್ದಾರೆ.

ADVERTISEMENT

ವಿಷಯ ತಿಳಿದ ರೈಲ್ವೆ ಇಲಾಖೆಯ ಭದ್ರಾವತಿ ಹಾಗೂ ಶಿವಮೊಗ್ಗ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಎಂಜಿನ್ ಮತ್ತು ಬೋಗಿ ನಡುವೆ ಸಂಪರ್ಕ ಕಲ್ಪಿಸಿದರು. ರೈಲು 1 ಗಂಟೆ ತಡವಾಗಿ ಹೊರಟಿತು.

ರೈಲು ಎಂಜಿನ್ ಮತ್ತು ಬೋಗಿಗಳ ನಡುವೆ ಸಂಪರ್ಕ ತಪ್ಪುವುದು ತುಂಬಾ ಅಪರೂಪ. ತಾಂತ್ರಿಕ ಕಾರಣಗಳಿಂದ ಘಟನೆ ನಡೆದಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.