ಶಿರಾಳಕೊಪ್ಪದಲ್ಲಿ ನೂತನ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು
ಶಿರಾಳಕೊಪ್ಪ: ‘ರೈತರು ಬರಗಾಲದಂತಹ ಸಮಯದಲ್ಲೂ ಹೈನುಗಾರಿಕೆಯಿಂದ ತಮ್ಮ ಉಪ ಜೀವನ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಲವು ವರ್ಷಗಳಿಂದ ಆಯ್ಕೆ ಮಾಡಿದ್ದೀರಿ. ಇದೀಗ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನೂತನ ಸದಸ್ಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಾರಿಯಾಗಿದ್ದೇನೆ’ ಎಂದು ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಟಿ. ಶಿವಶಂಕರಪ್ಪ ಹಿರೇಜಂಬೂರು ಹೇಳಿದರು.
ಸಮೀಪದ ತಡಗಣಿ ಗ್ರಾಮದಲ್ಲಿ ಶುಕ್ರವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಲವಾರು ಸಮಸ್ಯೆಗಳಿದ್ದವು. ಅದನ್ನು ಉನ್ನತ ಶ್ರೇಣಿಯತ್ತ ಮುನ್ನಡೆಸಲಾಗಿದೆ. ಈ ಒಕ್ಕೂಟಕ್ಕೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ರಾಜಕಾರಣ ಮಾಡಿದ್ದು ಸರಿಯಲ್ಲ. ಸಂಘ ಯಾವುದೇ ಜಾತಿ, ಧರ್ಮ ಜನಾಂಗಕ್ಕೆ ಸೇರಿದ್ದಲ್ಲ. ಇದು ಎಲ್ಲರ ಆಸ್ತಿ ಇಂತಹ ಸಂಘದಲ್ಲಿ ಒಡಕು ಮೂಡಿಸುವ ಕೆಲಸವನ್ನು ಮಾಡುವುದು ಖಂಡನೀಯ’ ಎಂದರು.
ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲ್ಲೂಕು ಹಾಲು ಉತ್ಪಾದಕರ ಸಂಘಗಳ ನೌಕರರ ಯೂನಿಯನ್ ಅಧ್ಯಕ್ಷ ಶುಭಕರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ .ಪಿ. ರುದ್ರೇಗೌಡ , ಶಿವಾನಂದಪ್ಪ, ಎಚ್.ಡಿ ಲಕ್ಷಣಪ್ಪ ಇಟ್ಟಿಗೆಹಳ್ಳಿ, ಪದ್ಮಾವತಿ, ಲಲಿತಮ್ಮ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.