ADVERTISEMENT

ಶಿವಮೊಗ್ಗದಲ್ಲಿ ಇಬ್ಬರು ವೈದ್ಯರು ಸೇರಿ ಆರು ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:19 IST
Last Updated 26 ಜೂನ್ 2020, 16:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶಿವಮೊಗ್ಗ: ಜಿಲ್ಲೆಯಲ್ಲಿ ಶುಕ್ರವಾರ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ಆರು ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಒಟ್ಟು ಸಂಖ್ಯೆ 129ಕ್ಕೆ ತಲುಪಿದೆ.

35 ವರ್ಷದ ಪುರುಷ (ಪಿ–10826), 45 ವರ್ಷದ ಪುರುಷ (ಪಿ–10827), 38 ವರ್ಷದ ಪುರುಷ (ಪಿ–10828), 40 ವರ್ಷದ ಪುರುಷ (ಪಿ–10829), 30 ವರ್ಷದ ಮಹಿಳೆ (ಪಿ–10830), 20 ವರ್ಷದ ಯುವತಿ (ಪಿ–10831) ಸೋಂಕಿಗೆ ಒಳಗಾದವರು.

35 ವರ್ಷ (ಪಿ–10826), 38 ವರ್ಷದ (ಪಿ–10828) ಇಬ್ಬರು ವೈದ್ಯರಲ್ಲೂ ಕೊರೊನಾ ವೈರಸ್‌ ಕಾಣಿಸಿಕೊಂಡಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡ ತಕ್ಷಣ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಪಾಸಿಟಿವ್ ಬರುತ್ತಿದ್ದಂತೆ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆ ಕೋವಿಡ್‌ ಕೇಂದ್ರಕ್ಕೆ ದಾಖಲಿಸಲಾಗಿದೆ.

ADVERTISEMENT

ಶಿಕಾರಿಪುರ ತಾಲ್ಲೂಕಿನ ವೃದ್ಧೆ (ಪಿ–9546) ಕೊರೊನಾ ಸೋಂಕು ದೃಢಪಡುವ ಮೊದಲೇ ಜೂನ್‌ 20ರಂದು ಮೃತಪಟ್ಟಿದ್ದರು. ಜೂನ್‌ 22ರಂದು ಅವರಿಗೆ ಸೋಂಕು ಇರುವುದು ಖಚಿತವಾಗಿತ್ತು. ಅವರ ಪ್ರಥಮ ಸಂಪರ್ಕದಿಂದ ಅವರ ಕುಟುಂಬದ 40 ವರ್ಷದ ಪುರುಷ (ಪಿ–10829), 20 ವರ್ಷದ ಯುವತಿ (ಪಿ–10831)ಗೆ ಸೋಂಕು ತಗುಲಿದೆ.

45 ವರ್ಷದ ಪುರುಷ (ಪಿ–10827) ಭದ್ರಾವತಿಯವರು. 30 ವರ್ಷದ ಮಹಿಳೆ (ಪಿ–10830) ಲಕ್ಕವಳ್ಳಿಯಿಂದ ಬಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ದೃಢಪಟ್ಟ ನಂತರ ಮೆಗ್ಗಾನ್‌ಗೆ ಸ್ಥಳಾಂತರಿಸಲಾಗಿದೆ.

ಶುಕ್ರವಾರ ಮೂವರು ಸೇರಿ ಇದುವರೆಗೂ 96 ಜನರು ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, 31 ಜನರು ಮೆಗ್ಗಾನ್ ಕೋವಿಡ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.