ADVERTISEMENT

ಚಕ್ಕರ್ ಹೊಡೆಯಲು ಯತ್ನಿಸಿದ ವಿದ್ಯಾರ್ಥಿ; ಹುಡುಕಿ ಪರೀಕ್ಷೆ ಬರೆಯಿಸಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 5:49 IST
Last Updated 23 ಜುಲೈ 2021, 5:49 IST
ಆನವಟ್ಟಿ ಸಮೀಪದ ಜಡೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಕುಂಟು ನೆಪ ಹೇಳಿ ಪರೀಕ್ಷೆಗೆ ಗೈರಾಗುತ್ತಿದ್ದ ವಿದ್ಯಾರ್ಥಿಯನ್ನು ಸುರಿಯುವ ಮಳೆಯಲ್ಲಿ ಹುಡುಕಿ ಪರೀಕ್ಷಾ ಕೇಂದ್ರ ತಂದ ಶಿಕ್ಷಕರು.
ಆನವಟ್ಟಿ ಸಮೀಪದ ಜಡೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಕುಂಟು ನೆಪ ಹೇಳಿ ಪರೀಕ್ಷೆಗೆ ಗೈರಾಗುತ್ತಿದ್ದ ವಿದ್ಯಾರ್ಥಿಯನ್ನು ಸುರಿಯುವ ಮಳೆಯಲ್ಲಿ ಹುಡುಕಿ ಪರೀಕ್ಷಾ ಕೇಂದ್ರ ತಂದ ಶಿಕ್ಷಕರು.   

ಆನವಟ್ಟಿ: ಸಮೀಪದ ಜಡೆ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಹೇಶ್ ಎಚ್. ಕುಂಟು ನೆಪ ಹೇಳಿ ಪರೀಕ್ಷೆಯಿಂದ ಗೈರಾಗುತ್ತಿದ್ದ. ಸುರಿಯುವ ಮಳೆಯಲ್ಲೇ ಶಿಕ್ಷಕರು ಆತನನ್ನು ಹುಡುಕಿ ಕರೆತಂದರು.

ಪರೀಕ್ಷಾ ಭಯದಿಂದಾಗಿ ತನ್ನ ಆರೋಗ್ಯ ಸರಿ ಇಲ್ಲ ಎಂದು ಕುಂಟು ನೆಪ ಹೇಳಿ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದ. ಜಡೆ ಆಸ್ಪತ್ರೆಗೆ ಹೋಗುವುದಾಗಿ, ನಂತರ ಆನವಟ್ಟಿ ಆಸ್ಪತ್ರೆ ಹೋಗುತ್ತೇನೆ ಎಂದು ತಿಳಿಸಿದ್ದ. ಬಳಿಕ ಪರೀಕ್ಷೆಗೆ ಬಾರದೆ ಅಲೆದಾಡುತ್ತಿದ್ದನು.

ವಿಷಯ ತಿಳಿದ ಶಿಕ್ಷಕರಾದ ಶಂಕರ ಗೌಡ ಹಾಗೂ ಮನೋಜ್ ಕುಮಾರ್ ಸುರಿಯುವ ಮಳೆಯಲ್ಲೇ ಜಡೆ, ಆನವಟ್ಟಿ ಆಸ್ಪತ್ರೆ ಸೇರಿ ಇತರೆಡೆ ಬೈಕ್‍ನಲ್ಲಿ ಹುಡುಕಿದ್ದಾರೆ. ಅಂತಿಮವಾಗಿ ಮಂಗಾಪುರ ರಸ್ತೆ ಮಧ್ಯೆ ಸಿಕ್ಕ ವಿದ್ಯಾರ್ಥಿಯನ್ನು ಶಾಲೆಗೆ ಕರೆತಂದು ಪರೀಕ್ಷೆ ಬರೆಯಲು ಕೂರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.