
ಪ್ರಾತಿನಿಧಿಕ ಚಿತ್ರ
ಸಾಗರ: ಇಲ್ಲಿನ ಅಭಿನಯ ಸಾಗರ ಸಂಸ್ಥೆಯು ಡಿ.5 ರಿಂದ 7ರವರೆಗೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೌಶಿಕ್ ಕಾನುಗೋಡು ತಿಳಿಸಿದ್ದಾರೆ.
5ರಂದು ಸಂಜೆ 6.30ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಪುರುಷೋತ್ತಮ ತಲವಾಟ, ಸಂತೋಷ್ ಸದ್ಗುರು, ಮ.ಸ.ನಂಜುಂಡಸ್ವಾಮಿ, ಸಂದೀಪ್ ಶೆಟ್ಟಿ, ಸುಧೀರ್ ಶೆಟ್ಟಿ ಹಾಜರಿರುತ್ತಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.
5 ರಂದು ಸಂಜೆ 7ಕ್ಕೆ ಸಿದ್ದಾಪುರದ ಒಡ್ಡೋಲಗ ರಂಗ ಪರ್ಯಟನೆ ತಂಡದಿಂದ ‘ಶುನಶ್ಯೇಪ’ (ರಚನೆ: ನಿಸರ್ಗಪ್ರಿಯ, ನಿರ್ದೇಶನ: ಮಂಜುನಾಥ ಬಡಿಗೇರ್), 6ರಂದು ಬೆಂಗಳೂರಿನ ಕಲಾ ಮಾಧ್ಯಮ ಸಂಸ್ಥೆಯಿಂದ ‘ನನ್ನ ತೇಜಸ್ವಿ’ (ರಚನೆ:ರಾಜೇಶ್ವರಿ ತೇಜಸ್ವಿ, ರಂಗರೂಪ, ನಿರ್ದೇಶನ: ಬಿ.ಎಂ.ಗಿರಿರಾಜ), 7 ರಂದು ಬೆಂಗಳೂರಿನ ನೆನಪು ಕಲ್ಚರಲ್ ಚಾರಿಟಬಲ್ ಟ್ರಸ್ಟ್ ನಿಂದ ‘ಮಾಯಾದ್ವೀಪ’ (ರಚನೆ: ವಿಲಿಯಂ ಶೇಕ್ಸ್ ಪಿಯರ್, ನಿರ್ದೇಶನ: ಪುನಿತ್ ರಂಗಾಯಣ) ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಪ್ರಮುಖರಾದ ನಾರಾಯಣ ಮೂರ್ತಿ ಕಾನುಗೋಡು, ಸಂಜೀವ್ ಕುಮಾರ್, ಪ್ರಶಾಂತ್ , ಪ್ರತಾಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.