
ರಿಪ್ಪನ್‌ಪೇಟೆ: ‘ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಅಧ್ಯಯನಕ್ಕೆ ಪ್ರಶಾಂತ ವಾತಾವರಣ ಹಾಗೂ ಏಕಾಗ್ರತೆ ಅಗತ್ಯವಾಗಿದೆ’ ಎಂದು ಹಿರಿಯ ತಜ್ಞ ವೈದ್ಯ ಜೆ.ಡಿ.ನಾರಾಯಣಪ್ಪ ಹೇಳಿದರು.
‘ಶಬ್ಧ ಮಾಲಿನ್ಯವು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರೌಢ, ಪದವಿ ಹಾಗೂ ವೃತ್ತಿಪರ ಕೋರ್ಸ್‌ಗಳ ಜೊತೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಾಲಘಟ್ಟದಲ್ಲಿ ಪೋಷಕರು ಸೂಕ್ಷ್ಮ ವಿಚಾರಗಳನ್ನು ಗಮನಿಸಬೇಕು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಗ್ರಾಮ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದ ಮೆರವಣಿಗೆಗಳಲ್ಲಿ ಅಳವಡಿಸುವ ಧ್ವನಿವರ್ಧಕಗಳ ಅಬ್ಬರಕ್ಕೆ ಪರೀಕ್ಷಾ ಅವಧಿಯಲ್ಲಿ ಕಡಿವಾಣ ಹಾಕಬೇಕು. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿಯಿಂದ ದೂರ ಇರಬೇಕು’ ಎಂದು ಸಲಹೆ ನೀಡಿದರು.
ಶಬ್ಧಮಾಲಿನ್ಯ ಕಡಿಮೆ ಮಾಡುವುದರಿಂದ ಮಾನಸಿಕ ಒತ್ತಡ, ಆತಂಕ ದೂರ ಮಾಡಬಹುದು. ಪರೀಕ್ಷಾ ಅವಧಿಯಲ್ಲಿ ನಾಗರಿಕರು ಸ್ವಯಂ ನಿಯಂತ್ರಣಕ್ಕೆ ಒಳಪಡುವುದು ಅತ್ಯವಶ್ಯ. ಜಾಗೃತಿ ಅಭಿಯಾನದ ಮೂಲಕ ‘ಪರೀಕ್ಷಾ ಸಮಯ – ಶಾಂತತೆ ನಮ್ಮ ಕರ್ತವ್ಯ’ ಎಂಬ ಘೋಷವಾಕ್ಯದ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಬೇಕು. ವಿದ್ಯಾರ್ಥಿಗಳ ಯಶಸ್ಸು ಸಮಾಜದ ಸಹಕಾರವನ್ನೂ ಅವಲಂಬಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.