ADVERTISEMENT

ಕ್ಯಾಂಪ್‌ಗೆ ತೆರಳಿದ್ದ ಪೆಸಿಟ್‌ ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 2:30 IST
Last Updated 8 ಡಿಸೆಂಬರ್ 2019, 2:30 IST

ಶಿವಮೊಗ್ಗ: ತಾಲ್ಲೂಕಿನ ಬೀರನಕೆರೆ ಬಳಿ ಪೆಸಿಟ್‌ಡಿಪ್ಲೊಮಾಕಾಲೇಜು ಹಮ್ಮಿಕೊಂಡಿದ್ದ ಶಿಬಿರಕ್ಕೆ ತೆರಳಿದ್ದ ವಿದ್ಯಾರ್ಥಿನಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿಮೃತಪಟ್ಟಿದ್ದಾರೆ.

ಅಂತಿಮ ವರ್ಷದ ಸಿವಿಲ್‌ ವಿಭಾಗದ ಪರಿಣಿತಾ (20) ಮೃತ ವಿದ್ಯಾರ್ಥಿನಿ.ಉಪನ್ಯಾಸಕಿ ರಕ್ಷಿತಾ ಗಾಯಗೊಂಡಿದ್ದಾರೆ. ಪರಿಣಿತಾ ಅವರದು ಭದ್ರಾವತಿ.

ಡಿ.4ರಿಂದ ಬೀರನಕೆರೆಯಲ್ಲಿ 22 ವಿದ್ಯಾರ್ಥಿಗಳ ಜತೆ ವಾಸ್ತವ್ಯ ಹೂಡಿದ್ದರು. ಶನಿವಾರ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಹಿಂದಿನಿಂದ ಬಂದ ಅಪರಿಚಿತ ವಾಹನಡಿಕ್ಕಿ ಹೊಡೆದುಮೃತಪಟ್ಟಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿಹೇಳಿಕೆ ನೀಡಿದೆ. ಮೆಗ್ಗಾನ್‌ ಆಸ್ಪತ್ರೆಯ ಶವಾಗಾರದ ಮುಂದೆಪೋಷಕರ ಆಕ್ರೋಂದನ ಮುಗಿಲು ಮುಟ್ಟಿತ್ತು.ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿ ನಡುವೆ ವಾಗ್ವಾದ ನಡೆಯಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ, ಸಂಧಾನ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.