ADVERTISEMENT

ವಿದ್ಯಾರ್ಥಿಗಳು ಸಾಂಸ್ಕೃತಿಕ ರಾಯಭಾರಿಗಳು

ಕಸ್ತೂರ ಬಾ ಬಾಲಿಕ ಪದವಿ ಪೂರ್ವ ಕಾಲೇಜು: ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:00 IST
Last Updated 10 ಡಿಸೆಂಬರ್ 2025, 5:00 IST
ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರ ಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನಿಂದ ಈಚೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದ ನೋಟ
ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರ ಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನಿಂದ ಈಚೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದ ನೋಟ   

ಶಿವಮೊಗ್ಗ: ಇಂದು ಶಿಕ್ಷಣದಿಂದ ಮಾತ್ರ ಸಮಾನ ಅವಕಾಶಗಳು ದೊರೆಯಲು ಸಾಧ್ಯ. ಶಿಕ್ಷಣ ಹಾಗೂ ಸಂಸ್ಕಾರ, ರಥದ ಎರಡು ಚಕ್ರಗಳಿದ್ದಂತೆ. ನಾವು ಇಂದು ಸುಶಿಕ್ಷಿತರಾದರೆ ಸಾಲದು ಸುಸಂಸ್ಕೃತ ವ್ಯಕ್ತಿತ್ವ ರೂಪಿಸಿಕೊಳ್ಳುವುದರಿಂದ ಮಾತ್ರ ಸಮಾಜದಲ್ಲಿ ಮನ್ನಣೆ ದೊರಯುತ್ತದೆ ಎಂದು ರಾಷ್ಟೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರ ಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನಿಂದ ಈಚೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಭಾರತ ಸೇವಾ ದಳ ಮತ್ತು ರೇಂಜರ್ಸ್ ಕ್ಲಬ್ ಸಮಾರೋಪ, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶುದ್ಧ ಮಾತುಗಾರಿಕೆ ವ್ಯಕ್ತಿತ್ವದ ಪ್ರಬುದ್ಧತೆಯನ್ನು ತೋರಿಸುತ್ತದೆ. ಒಂದು ಭಾಷೆಯು ಸೋತಾಗ ಮಾತ್ರ ಸಂಸ್ಕೃತಿ ಸೋಲುತ್ತದೆ. ಹಾಗಾಗಿ ಭಾಷೆಯನ್ನು ಪ್ರೀತಿಸಿ, ಉಳಿಸಿ ಮುಂದಿನ ಭವಿಷ್ಯಕ್ಕೆ ಕೊಂಡೊಯ್ಯುವ ಕೆಲಸ ವಿದ್ಯಾರ್ಥಿಗಳು ಮಾಡಲಿ ಎಂದರು.  

ADVERTISEMENT

ತಂದೆ–ತಾಯಿಗಳಿಗೆ ವಂಚಿಸದೆ ಅವರ ಕನಸು ಸಾಕಾರಗೊಳಿಸಲು ಶ್ರಮ ವಹಿಸುವಂತೆ ಕಿವಿಮಾತು ಹೇಳಿದರು.

ಅತಿಥಿಯಾಗಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಭಿಷೇಕ್ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಹಿಡಿದ ಕನ್ನಡಿಯಾಗಿದೆ. ಸಮಾಜದಲ್ಲಿನ ಎಲ್ಲಾ ತಾರತಮ್ಯ ಮತ್ತು ಸವಾಲುಗಳನ್ನು ಮಹಿಳೆ ಇಂದು ಮೆಟ್ಟಿ ನಿಲ್ಲುವಂತೆ ಮಾಡಿರುವುದು ಶಿಕ್ಷಣ. ಆದ್ದರಿಂದ ಉತ್ತಮ ಶಿಕ್ಷಣ ಪಡೆದು ಸಮಾಜದ ಎಲ್ಲಾ ರಂಗಗಳಲ್ಲಿ ಮಹಿಳೆ ಇನ್ನು ಎತ್ತರಕ್ಕೆ ಏರಲಿ ಎಂದು ಆಶಿಸಿದರು. ಇದೇ ವೇಳೆ ರಾಜ್ಯ ಮಟ್ಟದ ಕ್ರೀಡಾ ಪಟುಗಳನ್ನು ಗೌರವಿಸಿದರು.

ಪ್ರಾಂಶುಪಾಲ ಎಸ್.ಆರ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಹಿರಿಯ ನಿರ್ದೇಶಕ ಅಶ್ವಥ ನಾರಾಯಣ ಶೆಟ್ಟಿ, ಉಪ ಪ್ರಾಂಶುಪಾಲ ಸಿ. ತಿಪ್ಪೇಸ್ವಾಮಿ, ಸಂಚಾಲಕ ರವಿಕುಮಾರ್, ಹಿರಿಯ ಉಪನ್ಯಾಸಕ ಶುಭಕರ್, ಬಾಲಕೃಷ್ಣ ರಾವ್, ಅಶೋಕ್, ಸುಧೀರ್, ಮೃತ್ಯುಂಜಯ ಹಿರೇಮಠ, ರುಕ್ಸಾನಾ ಫಿರ್ದೋಸ್, ಪ್ರದೀಪ್, ಸುಮಾ, ಜ್ಯೋತಿ, ತಾರಾದೇವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.