ADVERTISEMENT

ಮಾನವೀಯತೆಯ ರಾಯಭಾರಿ ಸ್ವಾಮಿ ವಿವೇಕಾನಂದ: ಮಲ್ಲೇಶಪ್ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 12:54 IST
Last Updated 12 ಜನವರಿ 2025, 12:54 IST
ಹೊಳೆಹೊನ್ನೂರಿನಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು
ಹೊಳೆಹೊನ್ನೂರಿನಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು   

ಹೊಳೆಹೊನ್ನೂರು: ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ ಶಾಂತಿ ಮತ್ತು ಮಾನವೀಯತೆಯನ್ನು ಸಾರಿದ ರಾಯಭಾರಿ ಎಂದು ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಮಲ್ಲೇಶಪ್ಪ ಹೇಳಿದರು.

ಸಮೀಪದ ಕಲ್ಲಿಹಾಳ್ ಸರ್ಕಲ್‌ನ ವಿಶ್ವೇಶ್ವರಯ್ಯ ಪ್ರತಿಮೆಯ ಎದುರು ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವ ಕಂಡ ಅತ್ಯಂತ ಶ್ರೇಷ್ಠ ಮಹನೀಯರಲ್ಲಿ ವಿವೇಕಾನಂದರು ಒಬ್ಬರು. ಅವರ ಜೀವನ ಮುಂದಿನ ಪೀಳಿಗೆಗೆ ಮಾದರಿ. ಅವರ ಆದರ್ಶ ಯುವ ಪೀಳಿಗೆಯಲ್ಲಿ ನವ ಚೈತನ್ಯವನ್ನು ಮೂಡಿಸುತ್ತದೆ ಎಂದರು.

ADVERTISEMENT

‘ವಿವೇಕಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಯುವ ಸಮೂಹ ಸಾಗಬೇಕಾಗಿದೆ. ಮಹನೀಯರ ಜಯಂತಿಗಳು ಅವರ ಸಾಧನೆಗಳನ್ನು ಮೆಲುಕು ಹಾಕುವುದರ ಜೊತೆಗೆ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಿವೆ’ ಎಂದು ಯುವ ಮೋರ್ಚಾದ ಅಧ್ಯಕ್ಷ ಪಿ.ಎಸ್. ಕಿರಣ್ ಕುಮಾರ್ ಹೇಳಿದರು. 

ಬಿಜೆಪಿ ಮುಖಂಡರಾದ ಉಜ್ಜಿನಪ್ಪ, ನಾಗರಾಜಪ್ಪ, ಚಂದ್ರುಕುಮಾರ್, ಎ.ಎಂ. ಚಂದ್ರಶೇಖರ್, ಚಂದ್ರು, ನಂಜುಂಡಿ, ಅನೂಪ್ ಪಟೇಲ್, ಚಂದು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.