ADVERTISEMENT

ತಾಳಗುಪ್ಪ–ಮೈಸೂರು ಕುವೆಂಪು ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ನ.2ರಿಂದ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:27 IST
Last Updated 3 ಸೆಪ್ಟೆಂಬರ್ 2025, 4:27 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಶಿವಮೊಗ್ಗ: ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16221) ರೈಲು ಈಗ ಬೆಳಿಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಟು ಮಧಾಹ್ನ 3.35ಕ್ಕೆ ಮೈಸೂರು ತಲುಪುತ್ತಿದೆ. ನವೆಂಬರ್‌ 2ರಿಂದ ಈ ರೈಲು ಬೆಳಿಗ್ಗೆ 5.50ಕ್ಕೆ ತಾಳಗುಪ್ಪದಿಂದ ಹೊರಟು ಮಧ್ಯಾಹ್ನ 3.30ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.

ADVERTISEMENT

ಹೊಸ ವೇಳಾಪಟ್ಟಿ ಪ್ರಕಾರ ತಾಳಗುಪ್ಪ ನಿಲ್ದಾಣವನ್ನು ಬೆಳಿಗ್ಗೆ 5.50ಕ್ಕೆ ಬಿಟ್ಟು, ಸಾಗರ ಜಂಬಗಾರು ಬೆಳಿಗ್ಗೆ 6.10, ಶಿವಮೊಗ್ಗ ಬೆ. 7.55, ಭದ್ರಾವತಿ ಬೆ. 8.20, ತರೀಕೆರೆ ಬೆ. 8.43, ಬೀರೂರು ಬೆ. 9.35, ಅರಸೀಕೆರೆ ಬೆ. 10.50, ಹಾಸನ ಬೆ. 11.47, ಹೊಳೆನರಸೀಪುರ ಮಧ್ಯಾಹ್ನ 12.27, ಮೈಸೂರು ಮ. 3.30ಕ್ಕೆ ತಲುಪಲಿದೆ. 

ಕುವೆಂಪು ಎಕ್ಸ್‌ಪ್ರೆಸ್‌ ರೈಲು ತಾಳಗುಪ್ಪದಿಂದ ಸ್ವಲ್ಪ ಮುಂಚಿತವಾಗಿ ಹೊರಟರೆ ಬೆಂಗಳೂರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಜುಲೈ 24ರಂದು ಮನವಿ ಸಲ್ಲಿಸಿದ್ದು, ಅದಕ್ಕೆ ಅವರು ಸ್ಪಂದಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.