
ಪ್ರಜಾವಾಣಿ ವಾರ್ತೆ
ತೀರ್ಥಹಳ್ಳಿ: ರಾಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾ ನದಿಯ ಚಕ್ರತೀರ್ಥದ ಸಮೀಪ ನೀರಿನಲ್ಲಿ ಈಜಲು ತೆರಳಿದ್ದ ಮಹಾರಾಷ್ಟ್ರದ ಯುವಕ ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ವಿಕಾಸ್ ಬೋಸ್ಥೆ (18) ಎಂದು ಗುರುತಿಸಲಾಗಿದೆ. ಎಳ್ಳಮಾಸ್ಯೆ ಜಾತ್ರೆ ಇದ್ದಿದ್ದರಿಂದ ಅಂಗಡಿ ಹಾಕಲು ಬಂದಿದ್ದ ಯುವಕ ಮಧ್ಯಾಹ್ನ ಈಜಲು ತೆರಳಿದ್ದ. ಈ ವೇಳೇ ನೀರಿನ ಸೆಳೆತ ಹೆಚ್ಚಾಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಕುರುವಳ್ಳಿಯ ಮುಳುಗು ತಜ್ಞ ಪ್ರಮೋದ್ ಪೂಜಾರಿ ನೀರಿನಲ್ಲಿ ಶೋಧಾಚರಣೆ ನಡೆಸಿದ್ದರು. ಆದರೆ, ಮೃತದೇಹ ಸಿಕ್ಕಿರಲಿಲ್ಲ. ಸಂಜೆ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.