ಹೊಳೆಹೊನ್ನೂರು: ಪಟ್ಟಣದ ಶಕ್ತಿ ದೇವತೆ ಅಂತರಘಟ್ಟಮ್ಮ ಜಾತ್ರಾ ಮಹೋತ್ಸವ ಮೇ 13ರಿಂದ 18ರವರೆಗೆ ನಡೆಯಲಿದೆ.
13ರಂದು ರಾತ್ರಿ ಸಿದ್ದರು ಪೂಜೆ, 14ರ ಬೆಳಿಗ್ಗೆ ಝಂಡಾರೋಹಣ, ಸಂಜೆ 4.30ಕ್ಕೆ ಗಂಗೆ ಪೂಜೆ, ಮಕ್ಕಳ ದಿಂಡು ಉತ್ಸವ, 15ರ ಬೆಳಿಗ್ಗೆ 8ಕ್ಕೆ ಕೆಂಡಾರ್ಚನೆ, 16ರಂದು ಅಮ್ಮನವರ ಕುದುರೆ ರಾಜಬೀದಿ ಉತ್ಸವ, ರಾತ್ರಿ ಬಾಸಿಂಗ ತರುವುದು, ರಥದ ಕಳಸ ಪ್ರತಿಷ್ಠಾಪನೆ, 17ರಂದು ಬೆಳಿಗ್ಗೆ ಅಮ್ಮನವರ ಆನೆ ರಾಜಬೀದಿ ಉತ್ಸವ ಮತ್ತು ಮಕ್ಕಳ ಜವುಳ, ಸಂಜೆ 6.30ಕ್ಕೆ ರಥೋತ್ಸವ, 18ರಂದು ಓಕಳಿ ಕಾರ್ಯಕ್ರಮ ನಡೆಯಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದೇವಿ ಅಂತರಘಟ್ಟಮ್ಮ ಸೇವಾ ಸಮಿತಿ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.