ADVERTISEMENT

ಶಿವಮೊಗ್ಗ: 'ವಚನ ಸಾಹಿತ್ಯದ ಬೆಳಕು ನೀಡಿದ ಬಸವಣ್ಣ'

ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:26 IST
Last Updated 17 ನವೆಂಬರ್ 2025, 5:26 IST
ಶಿವಮೊಗ್ಗದ ಬಸವ ಮಂಟಪದಲ್ಲಿ ನಡೆದ ವಿಶ್ವ ಧರ್ಮ ಪ್ರವಚನವನ್ನು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಉದ್ಘಾಟಿಸಿದರು
ಶಿವಮೊಗ್ಗದ ಬಸವ ಮಂಟಪದಲ್ಲಿ ನಡೆದ ವಿಶ್ವ ಧರ್ಮ ಪ್ರವಚನವನ್ನು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಉದ್ಘಾಟಿಸಿದರು   

ಶಿವಮೊಗ್ಗ: ವಚನ ಸಾಹಿತ್ಯದ ಜ್ಞಾನ ಬೆಳಕನ್ನು ವಿಶ್ವಕ್ಕೆ ಪಸರಿಸಿದವರು ಗುರು ಬಸವಣ್ಣನವರು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಹೇಳಿದರು.

ಬಸವಣ್ಣನವರ ಲಿಂಗೈಕ್ಯ ಸ್ಥಳ ಕೂಡಲಸಂಗಮದಲ್ಲಿ ನಡೆಯುವ 39 ನೇ ಶರಣ ಮೇಳ ಕಾರ್ಯಕ್ರಮ ನಿಮಿತ್ತ ಶಿವಮೊಗ್ಗದ ಬಸವ ಮಂಟಪದಲ್ಲಿ ನಡೆದ ವಿಶ್ವ ಧರ್ಮ ಪ್ರವಚನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಎಲ್ಲರೂ ನಮ್ಮವರು ಎನ್ನುವ ವಿಶ್ವ ಭಾವೈಕ್ಯ ತತ್ವದಡಿಯಲ್ಲಿ ಎಲ್ಲರನ್ನೂ ಬರಮಾಡಿಕೊಂಡು, ಎಲ್ಲರಿಗೂ ಧಾರ್ಮಿಕ, ಆಧ್ಯಾತ್ಮಿಕ ಸಂಸ್ಕಾರ ನೀಡಿದವರು ಬಸವಣ್ಣ ಎಂದರು.

ADVERTISEMENT

ವಿಶ್ವಕ್ಕೆ ಪರಮಾತ್ಮ ತತ್ತ್ವದ ದರ್ಶನ ಶಾಸ್ತ್ರ ನೀಡುವುದರ ಮೂಲಕ ಎಲ್ಲರೂ ಪರಮಾತ್ಮ ತತ್ವ ವನ್ನು ಅರ್ಥ ಮಾಡಿಕೊಂಡು, ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ಆಶಯವನ್ನು ವಚನಗಳು ಹೊಂದಿವೆ.

'ಸ್ತ್ರೀಯರಿಗೂ ಸಹ ಧಾರ್ಮಿಕ ಸ್ವಾತಂತ್ರ್ಯ ನೀಡುವ ಮೂಲಕ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕಾರಣ ಕರ್ತರಾದವರು ಬಸವಣ್ಣ. ಅವರ ತತ್ವ ಸಂದೇಶದಡಿ ವಿಶ್ವ ಸಾಗಿದರೆ ಆನಂದ ಪೂರ್ಣ ಬದುಕು ಕಾಣಲು ಸಾಧ್ಯ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.