ADVERTISEMENT

ಲಿಂಗನಮಕ್ಕಿ: ನದಿ ಪಾತ್ರದ ಜನರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 3:57 IST
Last Updated 5 ಸೆಪ್ಟೆಂಬರ್ 2020, 3:57 IST

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು 13 ಅಡಿ ಬಾಕಿ ಇದ್ದು, ಒಳ ಹರಿವು ಹೆಚ್ಚಾದರೆ ಯಾವುದೇ ಸಮಯದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕರ್ನಾಟಕ ವಿದ್ಯುತ್ ನಿಗಮದ ಪ್ರಕಟಣೆ ತಿಳಿಸಿದೆ.

ಸಮುದ್ರ ಮಟ್ಟದಿಂದ 1819 ಅಡಿ ಗರಿಷ್ಠ ಮಟ್ಟ ಇರುವಜಲಾಶಯದಲ್ಲಿ ಪ್ರಸ್ತುತ 1806.85 ಅಡಿ ನೀರು ಸಂಗ್ರಹವಾಗಿದೆ.ಶುಕ್ರವಾರ ಒಳಹರಿವು 12,286 ಕ್ಯುಸೆಕ್ ಇದೆ. ಒಳ ಹರಿವಿನಲ್ಲಿ ಹೆಚ್ಚಳವಾದರೆ ಅಣೆಕಟ್ಟೆಯ ಸುರಕ್ಷತೆಗಾಗಿ ಯಾವುದೇ ಸಮಯದಲ್ಲಿ ಜಲಾಶಯದಿಂದ ನೀರು ಬಿಡಬಹುದು. ಅಣೆಕಟ್ಟೆಯ ಕೆಳಗೆ, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT