ADVERTISEMENT

ದಾರ್ಶನಿಕರ ಸಂದೇಶದಿಂದ ಸಾಮಾಜಿಕ ಸುಧಾರಣೆ: ತೋಯಜಾಕ್ಷಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:11 IST
Last Updated 4 ಮಾರ್ಚ್ 2026, 4:11 IST
ಸಾಗರದಲ್ಲಿ ಮಂಗಳವಾರ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು
ಸಾಗರದಲ್ಲಿ ಮಂಗಳವಾರ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು   

ಸಾಗರ: ಯೋಗಿ ನಾರಾಯಣ ಯತೀಂದ್ರರಂತಹ ದಾರ್ಶನಿಕರ ಸಂದೇಶಗಳನ್ನು ಪಾಲಿಸಿದರೆ ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಉಪ ತಹಶೀಲ್ದಾರ್ ತೋಯಜಾಕ್ಷಿ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ನಾರಾಯಣ ಯತೀಂದ್ರರು ಇಂದಿಗೂ ಪ್ರಸ್ತುತವಾಗುವ ಅತ್ಯಂತ ಮಹತ್ವದ ಸಂದೇಶಗಳನ್ನು ನಮಗೆ ನೀಡಿದ್ದಾರೆ. ಯುವಜನರು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಅವುಗಳನ್ನು ಪ್ರಸರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ADVERTISEMENT

ಸಹಾಯಕ ಪ್ರಾಧ್ಯಾಪಕ ಪ್ರೊ.ಚರಣ್ ಜಂಬಾನಿ ಉಪನ್ಯಾಸ ನೀಡಿದರು. ತಾಲ್ಲೂಕು ಬಲಿಜ ಸಮುದಾಯದ ಅಧ್ಯಕ್ಷ ಸತೀಶ್ ಆರ್. ಪ್ರಮುಖರಾದ ಶಾಂತಾ ಪಾಂಡುರಂಗ, ಮೋಹನ್, ವಿ.ಟಿ.ಸ್ವಾಮಿ, ದೇವರಾಜ್ ಎಸ್.ಪಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.