ADVERTISEMENT

ಅಕ್ಕಿ ಗಿರಣಿ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 10:15 IST
Last Updated 25 ಜನವರಿ 2011, 10:15 IST

ತುಮಕೂರು: ವಸತಿ ಪ್ರದೇಶದಲ್ಲಿರುವ ಅಕ್ಕಿ ಗಿರಣಿಗಳನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ ನೇತೃತ್ವದಲ್ಲಿ ಲಿಂಗಾಪುರ ಸುತ್ತಮುತ್ತಲ ನಿವಾಸಿಗಳು ಸೋಮವಾರ ಲಿಂಗಾಪುರ ವೃತ್ತದಿಂದ ನಗರಪಾಲಿಕೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಲಿಂಗಾಪುರ, ಡಿ.ಎಂ.ಪಾಳ್ಯ, ರಂಗಾಪುರ ಸುತ್ತಮತ್ತು ಇರುವ ಗಿರಣಿಗಳಿಂದ ಬಿಳಿ ಮತ್ತು ಕಪ್ಪು ಕಣಗಳಿಂದ ಬೆಳೆಗೆ ಹಾನಿಯಾಗುತ್ತಿದೆ. ಅಲ್ಲದೆ ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಉಂಟಾಗುತ್ತಿದೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ನಗರಪಾಲಿಕೆ ಆಯುಕ್ತರು ಮತ್ತು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಲಿಂಗಾಪುರ ಮಧ್ಯೆ ಹಾದುಹೋಗಿರುವ ಎನ್‌ಎಚ್4 ರಸ್ತೆಗೆ ಮೇಲ್ಸೆತುವೆ ನಿರ್ಮಿಸಬೇಕು.  ಸಮರ್ಪಕ ಕುಡಿಯುವ ನೀರು, ಒಳರಸ್ತೆ, ಮಳೆನೀರು ಚರಂಡಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ನಗರಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀನಿವಾಸ್, ವಾಜಿದ್‌ಖಾನ್, ಗಿರೀಶ್, ಜಗದೀಶ್, ರಂಗನಾಥ್, ಮೋಹನ್‌ಕುಮಾರ್, ವಿಜಯಕುಮಾರ್, ವಾಸುದೇವಕುಮಾರ್ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.