ADVERTISEMENT

ಪಾಲಿಕೆ ಸ್ಥಾಯಿ ಸಮಿತಿಗಳಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 11:45 IST
Last Updated 26 ಮೇ 2018, 11:45 IST

ತುಮಕೂರು: ಮಹಾನಗರ ಪಾಲಿಕೆಯ ಮೂರು ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಾಲಿಕೆ ಸಭಾಂಗಣದಲ್ಲಿ ಮೇಯರ್ ಸುಧೀಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಯಿತು.

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ 23ನೇ ವಾರ್ಡ್ ಸದಸ್ಯ ಎಚ್.ಮರಿಗಂಗಯ್ಯ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಹಣಕಾಸು ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 16ನೇ ವಾರ್ಡ್ ಸದಸ್ಯ ರಾಮಕೃಷ್ಣ ಹಾಗೂ ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 8ನೇ ವಾರ್ಡಿನ ಸದಸ್ಯ ನಯಾಜ್ ಅವರು ಅವಿರೋಧವಾಗಿ ಆಯ್ಕೆಯಾದರು.

ಮೂರು ಸ್ಥಾಯಿ ಸಮಿತಿಗಳಿಂದ ತಲಾ ಒಬ್ಬೊಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು.

ADVERTISEMENT

‘ಕಳೆದ ಮಾರ್ಚ್ 24ರಂದು ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆದಿತ್ತು. ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಆಯ್ಕೆಯಾಗಬೇಕಾದ ಸದಸ್ಯರು (ಬಿಜೆಪಿ ಸದಸ್ಯರು) ಗೈರು ಹಾಜರಾಗಿದ್ದರಿಂದ ಅಂದು ಈ ಸಮಿತಿಗೆ ಆಯ್ಕೆ ಸದಸ್ಯರ ಆಯ್ಕೆ ನಡೆದಿರಲಿಲ್ಲ. ಹೀಗಾಗಿ, ಆ ಸಮಿತಿಗೆ ಸದಸ್ಯರೇ ಆಯ್ಕೆ ಆಗಿಲ್ಲದಿರುವುದರಿಂದ ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆ ಈ ದಿನ ನಡೆದಿಲ್ಲ. ಈ ಸಮಿತಿಗೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕು. ಚುನಾವಣೆ ನಡೆಸುವ ಕುರಿತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ’ ಎಂದು ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ತಿಳಿಸಿದರು.

ಅಧ್ಯಕ್ಷರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಅವರ ಬೆಂಬಲಿಗರು ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಒಟ್ಟು ನಾಲ್ಕು ಸ್ಥಾಯಿ ಸಮಿತಿಗಳಲ್ಲಿ 2 ಸಮಿತಿ ಜೆಡಿಎಸ್ ಪಾಲಾಗಿದ್ದು, 1 ಕಾಂಗ್ರೆಸ್ ಪಾಲಾಗಿದೆ. ಲೆಕ್ಕಪತ್ರ ಸ್ಥಾಯಿ ಸಮಿತಿ ಬಿಜೆಪಿ ಸದಸ್ಯರು, ಅಧ್ಯಕ್ಷರು ಆಯ್ಕೆಯಾಗಬೇಕಿದೆ.ಮಹಾನಗರ ಪಾಲಿಕೆಯ ಮೂರು ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪಾಲಿಕೆ ಸಭಾಂಗಣ
ದಲ್ಲಿ ಮೇಯರ್ ಸುಧೀಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಯಿತು.

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ 23ನೇ ವಾರ್ಡ್ ಸದಸ್ಯ ಎಚ್.ಮರಿಗಂಗಯ್ಯ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಹಣಕಾಸು ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 16ನೇ ವಾರ್ಡ್ ಸದಸ್ಯ ರಾಮಕೃಷ್ಣ ಹಾಗೂ ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 8ನೇ ವಾರ್ಡಿನ ಸದಸ್ಯ ನಯಾಜ್ ಅವರು ಅವಿರೋಧವಾಗಿ ಆಯ್ಕೆಯಾದರು.

ಮೂರು ಸ್ಥಾಯಿ ಸಮಿತಿಗಳಿಂದ ತಲಾ ಒಬ್ಬೊಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು.

‘ಕಳೆದ ಮಾರ್ಚ್ 24ರಂದು ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆದಿತ್ತು. ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಆಯ್ಕೆಯಾಗಬೇಕಾದ ಸದಸ್ಯರು (ಬಿಜೆಪಿ ಸದಸ್ಯರು) ಗೈರು ಹಾಜರಾಗಿದ್ದರಿಂದ ಅಂದು ಈ ಸಮಿತಿಗೆ ಆಯ್ಕೆ ಸದಸ್ಯರ ಆಯ್ಕೆ ನಡೆದಿರಲಿಲ್ಲ. ಹೀಗಾಗಿ, ಆ ಸಮಿತಿಗೆ ಸದಸ್ಯರೇ ಆಯ್ಕೆ ಆಗಿಲ್ಲದಿರುವುದರಿಂದ ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆ ಈ ದಿನ ನಡೆದಿಲ್ಲ. ಈ ಸಮಿತಿಗೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕು. ಚುನಾವಣೆ ನಡೆಸುವ ಕುರಿತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ’ ಎಂದು ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ತಿಳಿಸಿದರು.

ಅಧ್ಯಕ್ಷರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಅವರ ಬೆಂಬಲಿಗರು ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಒಟ್ಟು ನಾಲ್ಕು ಸ್ಥಾಯಿ ಸಮಿತಿಗಳಲ್ಲಿ 2 ಸಮಿತಿ ಜೆಡಿಎಸ್ ಪಾಲಾಗಿದ್ದು, 1 ಕಾಂಗ್ರೆಸ್ ಪಾಲಾಗಿದೆ. ಲೆಕ್ಕಪತ್ರ ಸ್ಥಾಯಿ ಸಮಿತಿ ಬಿಜೆಪಿ ಸದಸ್ಯರು, ಅಧ್ಯಕ್ಷರು ಆಯ್ಕೆಯಾಗಬೇಕಿದೆ.

ಸದಸ್ಯರು ಯಾರು

ಯೂಸೂಫ್‌ಖಾನ್, ಮುಜಿದಾ ಖಾನಂ,ಟಿ.ಎಚ್.ಬಾಲಕೃಷ್ಣ, ಫರ್ಜಾನಾ ಖಾನಂ, ರೆಹಮತ್ ಉನ್ನಿಸಾ ಎಂ.ಎಚ್. ಜಯಲಕ್ಷ್ಮಿ(ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿ), ಎಚ್.ರವಿಕುಮಾರ್, ಟಿ.ಆರ್.ನಾಗರಾಜ್, ಮಹಮ್ಮದ್ ಹಫೀಜ್, ಎನ್.ಮಹೇಶ್, ಜಿ.ಆರ್. ಧನಲಕ್ಷ್ಮಿರವಿ, ಲೋಕೇಶ್ (ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಹಣಕಾಸು ನ್ಯಾಯ ಸ್ಥಾಯಿ ಸಮಿತಿ), ಜಯಮ್ಮ, ಯಶೋಧಮ್ಮ, ಎನ್.ಆರ್.ನಾಗರಾಜರಾವ್, ಮಹಮ್ಮದ್ ನದೀಂ ಪಾಷಾ, ಗೀತಾ ರುದ್ರೇಶ್, ಲಲಿತಾ( ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.