ತುಮಕೂರು: ಎಲ್ಲ ಸಮಸ್ಯೆಗಳಿಗೆ ಮನಸ್ಸೇ ಮೂಲ. ಸಮಸ್ಯೆಗಳಿಗೆ ಪರಹಾರ ಕಂಡುಕೊಳ್ಳುವ ಮುಖ್ಯ ಸಾಧನವೂ ಮನಸ್ಸೇ ಆಗಿದೆ. ಮನಸ್ಸು ನಿಯಂತ್ರಣದಲ್ಲಿಟ್ಟುಕೊಂಡವರಿಗೆ `ಮಾನಸಿಕ ಒತ್ತಡ~ದ ಸಮಸ್ಯೆ ಎಂದಿಗೂ ಬಾಧಿಸುವುದಿಲ್ಲ ಎಂದು ವೈದ್ಯೆ ಡಾ.ಎನ್.ಜೆ. ಇಂದಿರಾ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಸಂಶೋಧನಾ ಕೇಂದ್ರ ಒಕ್ಕೂಟದ ವತಿಯಿಂದ ಈಚೆಗೆ ಆಯೋಜಿಸಲಾಗಿದ್ದ ಒತ್ತಡ ನಿರ್ವಹಣೆ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಪ್ರತಿಕ್ಷಣವನ್ನೂ ಮನುಷ್ಯರು ಈಚೆಗೆ ಆತಂಕದಲ್ಲಿ ಅನುಭವಿಸುತ್ತಿದ್ದಾರೆ.
ನಾವು ಮಾಡುವ ಎಲ್ಲ ಕೆಲಸಗಳಲ್ಲಿಯೂ ಆನಂದ ಅನುಭವಿಸುವಂತಾದರೆ ಮಾತ್ರ ಒತ್ತಡ ಮಾಯವಾಗಿ ಸಮಚಿತ್ತ ನಮ್ಮದಾಗುತ್ತದೆ ಎಂದು ಹೇಳಿದರು.ಕುಲಸಚಿವರಾದ ಪ್ರೊ.ಡಿ. ಶಿವಲಿಂಗಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.