ADVERTISEMENT

ಮೂರು ದಶಕಗಳ ನಂತರ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 6:51 IST
Last Updated 26 ನವೆಂಬರ್ 2017, 6:51 IST

ತೋವಿನಕೆರೆ: ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರೇನಹಳ್ಳಿಯಲ್ಲಿ ಮೂವತ್ತು ವರ್ಷಗಳ ನಂತರ ಈಚಗೆ ಕನ್ನಡ ರಾಜ್ಯೋತ್ಸವನ್ನು ಅಚರಣೆ ಮಾಡಲಾಯಿತು.

ದಿವಂಗತ ಸೂ.ಸಿ.ಅಡವೀಶಯ್ಯ ಅವರು ಹಲವು ದಶಕಗಳ ಹಿಂದೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಅಚರಣೆ ಮಾಡುತ್ತಿದ್ದರು. ದಾನ ಶೂರ ಕರ್ಣ ಪೌರಾಣಿಕ ನಾಟಕ ಹಾಗೂ ಸದಾರಮೆ ಎಂಬ ಸಾಮಾಜಿಕ ನಾಟಕವನ್ನು ಗ್ರಾಮಸ್ಥರ ಜತೆ ಸೇರಿಕೊಂಡು ಆಡುತ್ತಿದ್ದರು. ಅವರು ನಿಧನರಾದ ನಂತರ ಸ್ಥಗಿತವಾಗಿದ್ದ ರಾಜ್ಯೋ
ತ್ಸವ ಸಮಾರಂಭವನ್ನು ಯುವಕರು ಈಚಗೆ ನಡೆಸಿ ಸುತ್ತಮುತ್ತಲಿನ ಗ್ರಾಮಸ್ಥರ ಗಮನ ಸೆಳೆದಿದ್ದಾರೆ.

ಗ್ರಾಮದಲ್ಲಿ ಹುಟ್ಟಿರುವ ಸರಿಗಮಪ ಸೀಸನ್-9 ಗಾಯಕ ಮಸಾಲ ಮಂಜು, ಡ್ರಾಮ ಜ್ಯೂನಿಯರ್‍ಸ್ ಸೀಸನ್-9 ಖ್ಯಾತಿಯ ದಿವ್ಯಶ್ರೀ, ಕಿರುತೆರೆ ನಟ ಸಿದ್ದೇಶ್, ಕಣ್ಣಿನಲ್ಲಿ ಬಿದ್ದಿರುವ ಕಸವನ್ನು ನಾಲಿಗೆಯ ಮೂಲಕ ತೆಗೆಯುವ ಹಸೇ ನಮ್ಮ, ನಾಟಿ ಪಶು ವ್ಯೆದ್ಯರಾದ ಓಬಳಯ್ಯ ಅವರನ್ನು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರಶೀವಾಚಾರ್ಯ ಸ್ವಾಮೀಜಿ ಅಭಿನಂದಿಸಿದರು.

ADVERTISEMENT

ಮೆಳೇಹಳ್ಳಿ ಡಮರುಗ ಸಂಪನ್ಮೂಲ ಕೇಂದ್ರವರು ಸಾಮಾಜಿಕ ನಾಟಕ ಪ್ರದರ್ಶಿಸಿದರು. ಕೊರಟಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಲಿಕುಂಟೆ ಮಲ್ಲಿಕಾರ್ಜುನ, ಅರಕೆರೆ ಶಂಕರಣ್ಣ, ಮೆಳೇಹಳ್ಳಿ ದೇವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ನಂಜೇಗೌಡ, ರಾಧಾ ತಿಮ್ಮರಾಜು, ಸಿದ್ಧಗಂಗಮ್ಮ, ಟಿ.ಆರ್.ನಾಗರಾಜು, ಎಪಿಎಂಸಿ ಸದಸ್ಯ ಮಣುವಿನಕುರಿಕೆ ಲೋಕೇಶ್, ಮುಖಂಡರಾದ ಸೂರೇನಹಳ್ಳಿ ಸಿದ್ದನಂಜಯ್ಯ, ಶಂಕರಲಿಂಗಪ್ಪ, ಎಸ್.ಎನ್.ವೀರಪ್ಪ, ಲೋಕೇಶ್ ಎಸ್.ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.