ADVERTISEMENT

ಅ.10ರಿಂದ ಮೂರು ದಿನ ಅಧಿವೇಶನ: ಸಚಿವ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 16:48 IST
Last Updated 27 ಸೆಪ್ಟೆಂಬರ್ 2019, 16:48 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ತುಮಕೂರು: ‘ಉಪ ಚುನಾವಣೆ ಘೋಷಣೆಯಾಗಿದ್ದರಿಂದ ಬರೀ ಬಜೆಟ್ ವಿಷಯಕ್ಕೆ ಸೀಮಿತವಾಗಿ ಚರ್ಚಿಸಲು ಅ.10 ರಿಂದ ಮೂರು ದಿನ ಅಧಿವೇಶನ ಕರೆಯಲಾಗಿತ್ತು. ಆ ಪ್ರಕಾರ ಮೂರು ದಿನ ಅಧಿವೇಶನ ನಡೆಯಲಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, 'ಈ ಹಂತದಲ್ಲಿ ಅಧಿವೇಶನ ಮುಂಚಿತವಾಗಿಯೇ ನಡೆಸುವುದು ಅಥವಾ ಮುಂದೂಡುವುದು ಅಸಾಧ್ಯ.ಅ.10ರಂದು ಸಂಸದೀಯ ವ್ಯವಹಾರಗಳ ಸಲಹಾ ಸಮಿತಿ ಮೂರು ದಿನಕ್ಕಿಂತ ಹೆಚ್ಚು ದಿನ ಅಧಿವೇಶನ ಮಾಡಬಹುದು ಎಂದು ಸಲಹೆ ನೀಡಿದರೆ ಮುಂದುವರಿಸಬಹುದು’ ಎಂದರು.

’ಆದರೆ, ನಿಯಮಾವಳಿ ಪ್ರಕಾರ ಹೆಚ್ಚು ದಿನ ಅಧಿವೇಶನ ನಡೆಯಬೇಕಾದರೆ ಸಚಿವ ಸಂಪುಟ ಸಭೆ ತೀರ್ಮಾನ ಮಾಡಬೇಕು. ಹದಿನೈದು ದಿನ ಮುಂಚಿತವಾಗಿಯೇ ತಿಳಿಸಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

’ಶಾಸಕರ ಅನರ್ಹತೆ ಕುರಿತ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಉಪಚುನಾವಣೆ ಘೋಷಣೆ ಮಾಡಿದ್ದು ತಪ್ಪು. ಈ ವಿಚಾರದಲ್ಲಿ ಕೋರ್ಟ್ ಪರಿಶೀಲನೆ ಮಾಡಿ ಚುನಾವಣೆ ಮುಂದೂಡಿಕೆಗೆ ಆದೇಶ ಮಾಡಿರುವುದು ಸರಿ ಎಂಬುದು ನನ್ನ ಅಭಿಪ್ರಾಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.