ADVERTISEMENT

ತುಮಕೂರು | ‘ನೋಟಾ’ಗೆ 6,460 ಮತ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 6:44 IST
Last Updated 5 ಜೂನ್ 2024, 6:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಲೋಕಸಭೆ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ‘ನೋಟಾ’ಗೂ ಜನರ ಬೆಂಬಲ ಸಿಕ್ಕಿದೆ. ಒಟ್ಟು 6,460 ಮಂದಿ ‘ನೋಟಾ’ ಒತ್ತಿದ್ದಾರೆ.

ಚುನಾವಣೆಯಲ್ಲಿ ‘ನೋಟಾ’ ನಾಲ್ಕನೇ ಸ್ಥಾನ ಪಡೆದಿದೆ. ಅಂಚೆ ಮತದಾರರು ಸಹ ‘ನೋಟಾ’ ಬೆಂಬಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 7,20,946, ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ 5,45,352, ಪಕ್ಷೇತರ ಅಭ್ಯರ್ಥಿ ಜೆ.ಕೆ.ಸಮಿ 6,775 ನಂತರ ‘ನೋಟಾ’ಗೆ ಹೆಚ್ಚಿನ ಮತಗಳು ಬಿದ್ದಿದೆ. ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರೂ ಇಷ್ಟವಿಲ್ಲದಿದ್ದರೆ ‘ನೋಟಾ’ಗೆ ತಮ್ಮ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 814, ತಿಪಟೂರು 675, ತುರುವೇಕೆರೆ 917, ತುಮಕೂರು ನಗರ 772, ತುಮಕೂರು ಗ್ರಾಮಾಂತರ 894, ಕೊರಟಗೆರೆ 852, ಗುಬ್ಬಿ 703, ಮಧುಗಿರಿಯಲ್ಲಿ 799 ಮತದಾರರು ಮತ್ತು 34 ಅಂಚೆ ಮತದಾರರು ‘ನೋಟಾ’ಗೆ ಮತ ಹಾಕಿದ್ದಾರೆ.

ADVERTISEMENT

857 ಮತ ತಿರಸ್ಕೃತ: ಅಂಚೆ ಮೂಲಕ ಮತದಾನ ಮಾಡಿದವರ 857 ಮತಗಳು ತಿರಸ್ಕೃತಗೊಂಡಿವೆ. ವಿದ್ಯಾವಂತರು, ನೌಕರರು ಮತದಾನದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. 85 ವರ್ಷ ಮೇಲ್ಪಟ್ಟವರು, ಅಂಗವಿಕಲರು ಸಹ ಮತದಾನದ ವೇಳೆ ಎಡವಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.