ADVERTISEMENT

ದೇಶದಲ್ಲಿ 70 ಲಕ್ಷ ಮಾದಕ ವ್ಯಸನಿಗಳು: ನವೀನ್‌ರಾಜ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 7:32 IST
Last Updated 31 ಆಗಸ್ಟ್ 2025, 7:32 IST
ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಶನಿವಾರ ನಶೆ ಮುಕ್ತ ಭಾರತ ಅಭಿಯಾನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌, ವಿದ್ಯೋದಯ ಫೌಂಡೇಷನ್‌ ಟ್ರಸ್ಟ್‌ ಸಿಇಒ ಪ್ರೊ.ಕೆ.ಚಂದ್ರಣ್ಣ, ಆಡಳಿತಾಧಿಕಾರಿ ಎಚ್.ಎಸ್.ರಾಜು, ಪ್ರಾಂಶುಪಾಲರಾದ ಶಮಾ ಸೈಯದಿ ಇತರರು ಉಪಸ್ಥಿತರಿದ್ದರು

ತುಮಕೂರು: ದೇಶದಲ್ಲಿ ಪ್ರಸ್ತುತ ಶೇ 20ರಷ್ಟು ಯುವ ಸಮೂಹ ಮಾದಕ ವಸ್ತು ವ್ಯಸನಕ್ಕೆ ಒಳಗಾಗಿದೆ. ಇದರಿಂದ ಹೊರ ಬರಲು 70 ಲಕ್ಷ ಯುವ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ, ಪೊಲೀಸ್‌ ಇಲಾಖೆ, ಎನ್‌ಎಸ್‌ಎಸ್‌, ಎನ್‌ಸಿಸಿ ವತಿಯಿಂದ ‘ನಶೆ ಮುಕ್ತ ಭಾರತ’ ಅಭಿಯಾನದ ಅಂಗವಾಗಿ ಬಂಡೀಪುರದಿಂದ ಬೀದರ್‌ ವರೆಗೆ ಹಮ್ಮಿಕೊಂಡಿರುವ ಬೈಕ್‌ ರ್‍ಯಾಲಿ ಶನಿವಾರ ನಗರ ತಲುಪಿತು. ಇದರ ಪ್ರಯುಕ್ತ ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತು ಸಮಾಜದ ಎಲ್ಲ ರಂಗದಲ್ಲಿಯೂ ಪರಿಣಾಮ ಬೀರುತ್ತಿದೆ. ಇದರ ದುಷ್ಪರಿಣಾಮಗಳ ಕುರಿತು ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾದಕ ವಸ್ತು ಸೇವನೆಯಿಂದ ದೈಹಿಕ, ಮಾನಸಿಕ ಸಾಮರ್ಥ್ಯ ಕುಂಠಿತವಾಗುತ್ತದೆ. ಇದು ದೇಶದ ಬೆಳವಣಿಗೆಗೆ ಮಾರಕವಾಗಿದೆ. ಯುವಕರು ಚಟಕ್ಕೆ ಬೀಳದೆ ಕುಟುಂಬ, ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಪ್ರತಾಪ್‌ ಲಿಂಗಯ್ಯ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯೋದಯ ಫೌಂಡೇಷನ್‌ ಟ್ರಸ್ಟ್‌ ಸಿಇಒ ಪ್ರೊ.ಕೆ.ಚಂದ್ರಣ್ಣ, ಆಡಳಿತಾಧಿಕಾರಿ ಎಚ್.ಎಸ್.ರಾಜು, ಪ್ರಾಂಶುಪಾಲರಾದ ಶಮಾ ಸೈಯದಿ ಇತರರು ಹಾಜರಿದ್ದರು. ಎನ್‌ಎಸ್‌ಎಸ್‌ ವತಿಯಿಂದ ಕಿರು ನಾಟಕ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.