ADVERTISEMENT

83 ವಾಹನ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 3:44 IST
Last Updated 10 ಮೇ 2021, 3:44 IST
ಮಧುಗಿರಿಯಲ್ಲಿ ಭಾನುವಾರ ಅನಗತ್ಯವಾಗಿ ಸಂಚರಿಸಿದ ವಾಹನಗಳನ್ನು ಪೊಲೀಸ್ ಠಾಣೆಯ ಮುಂಭಾಗ ನಿಲುಗಡೆ ಮಾಡಲಾಗಿದೆ
ಮಧುಗಿರಿಯಲ್ಲಿ ಭಾನುವಾರ ಅನಗತ್ಯವಾಗಿ ಸಂಚರಿಸಿದ ವಾಹನಗಳನ್ನು ಪೊಲೀಸ್ ಠಾಣೆಯ ಮುಂಭಾಗ ನಿಲುಗಡೆ ಮಾಡಲಾಗಿದೆ   

ಮಧುಗಿರಿ: ಕೋವಿಡ್‌ ತಡೆಗೆ ಸರ್ಕಾರ ಜಾರಿಗೊಳಿಸಿರುವ ಕರ್ಫ್ಯೂ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದ 35 ಕಾರು ಹಾಗೂ 48 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತುಮಕೂರು, ಗೌರಿಬಿದನೂರು ರಸ್ತೆ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡು ಠಾಣೆಯ ಮುಂಭಾಗ ನಿಲುಗಡೆ ಮಾಡಿದರು.

ಮಧ್ಯಾಹ್ನ ಎರಡು ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರೂ, ಆನಂತರವೂ ಕೆಲವರು ಅನಗತ್ಯವಾಗಿ ಸಂಚರಿಸುತ್ತಿದ್ದಾರೆ. ಪೊಲೀಸರು ದ್ವಿಚಕ್ರ ವಾಹನ ಹಾಗೂ ಕಾರುಗಳ ದಾಖಲೆ ಪರಿಶೀಲಿಸಿ, ಸೋಮವಾರದಿಂದ ಅನಗತ್ಯವಾಗಿ ವಾಹನಗಳ ಸಂಚಾರ ಮಾಡದಂತೆ ಸೋಮವಾರ ಬೆಳಿಗ್ಗೆಯಿಂದ ಆರಂಭವಾಗಲಿರುವ ಕರ್ಫ್ಯೂ ಮತ್ತಷ್ಟು ಕಠಿಣವಾಗಿರುವುದರಿಂದ ಅನಗತ್ಯವಾಗಿ ವಾಹನಗಳ ಓಡಾಟ ನಡೆಸಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸಿಪಿಐ ಎಂ.ಎಸ್.ಸರ್ದಾರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.