ADVERTISEMENT

ಕಾಮನದುರ್ಗ ಬೆಟ್ಟದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 3:47 IST
Last Updated 13 ಮಾರ್ಚ್ 2021, 3:47 IST
ಪಾವಗಡ ತಾಲ್ಲೂಕು ಕಾಮನದುರ್ಗ ಬೆಟ್ಟವನ್ನು ಏರಿ ವಿಶ್ರಮಿಸುತ್ತಿರುವ ಭಕ್ತರು
ಪಾವಗಡ ತಾಲ್ಲೂಕು ಕಾಮನದುರ್ಗ ಬೆಟ್ಟವನ್ನು ಏರಿ ವಿಶ್ರಮಿಸುತ್ತಿರುವ ಭಕ್ತರು   

ಪಾವಗಡ: ತಾಲ್ಲೂಕಿನ ಕಾಮನದುರ್ಗ ಬೆಟ್ಟದ ರಾಮಲಿಂಗೇಶ್ವರ ದೇಗುಲದಲ್ಲಿ ಶುಕ್ರವಾರ ಶಿವರಾತ್ರಿ ಪ್ರಯುಕ್ತ ನಡೆದ ಪೂಜೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಗುರುವಾರ ಕಡಿದಾದ ಬೆಟ್ಟವನ್ನು ಏರಿ ರಾತ್ರಿ ದೇಗುಲದಲ್ಲಿಯೇ ಭಜನೆ, ಅಭಿಷೇಕ ಇತ್ಯಾದಿ ಪೂಜೆ ಸಲ್ಲಿಸಿದರು. ಶುಕ್ರವಾರ ಮಹಾ ಮಂಗಳಾರತಿ ನಂತರ ರಾಮಲಿಂಗೇಶ್ವರ ಸ್ವಾಮಿ ದೇಗುಲ ಸೇವಾ ಟ್ರಸ್ಟ್‌ನಿಂದ ಅನ್ನದಾನ ಮಾಡಲಾಯಿತು.

ಅಕ್ಕಮ್ಮರ ದೊಣೆಯಲ್ಲಿ ಮಹಿಳೆಯರು ಗಂಗಮ್ಮನ ಪೂಜೆ ಮಾಡಿದರು. ಬಾಣಂತಿ ಗುಂಡು ಬಳಿ ಹರಕೆ ಹೊತ್ತವರು ಕಲ್ಲನ್ನು ಇಟ್ಟರು. ಈ ರೀತಿ ಮಾಡುವುದರಿಂದ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ.

ADVERTISEMENT

ಬೆಟ್ಟದ ಮೇಲಿನ ಸಿದ್ದರಗವಿಯಲ್ಲಿ ನುಸುಳಿ ಹೋಗಿ ಅಲ್ಲಿನ ನೀರನ್ನು ತೀರ್ಥವಾಗಿ ಸೇವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.