ADVERTISEMENT

ಕೇಂದ್ರ ಗೃಹಕಾರ್ಯದರ್ಶಿಗೆ ದೂರವಾಣಿಯಲ್ಲಿ ನಿಂದನೆ: ಪಾವಗಡಕ್ಕೆ ಕೇಂದ್ರ ತನಿಖಾ ತಂಡ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 5:19 IST
Last Updated 12 ಫೆಬ್ರುವರಿ 2024, 5:19 IST
<div class="paragraphs"><p>ಪಾವಗಡ</p></div>

ಪಾವಗಡ

   

ಪಾವಗಡ: ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿ ನಿಂದಿಸಿದ ವ್ಯಕ್ತಿಯ ವಿಚಾರಣೆಗೆ ದೆಹಲಿಯಿಂದ ವಿಶೇಷ ಪೊಲೀಸ್‌ ಅಧಿಕಾರಿಗಳ ತಂಡವೊಂದು ಭಾನುವಾರ ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮಕ್ಕೆ ಬಂದಿದೆ.   

ಸ್ಥಳೀಯ ಪೊಲೀಸರೊಂದಿಗೆ ಬೆಳಗ್ಗೆ ಗ್ರಾಮಕ್ಕೆ ಬಂದ ವಿಶೇಷ ತನಿಖಾ ತಂಡದ ಅಧಿಕಾರಿಗಳು, ನಿರಂಜನ್ (40) ಎಂಬುವರ ಮನೆಗೆ ತೆರಳಿ ವಿಚಾರಣೆ ನಡೆಸಿದರು.

ADVERTISEMENT

ಕೆಲಹೊತ್ತು ಮನೆಯಲ್ಲಿ ಶೋಧನೆ ನಡೆಸಿದ ಅಧಿಕಾರಿಗಳು ನಂತರ ಅವರ ಸಂಬಂಧಿಕರು, ನೆರೆಹೊರೆಯವರಿಂದ ಮಾಹಿತಿ ಕಲೆ ಹಾಕಿದರು. ನಿರಂಜನ್‌ ನಡವಳಿಕೆ, ವೃತ್ತಿ, ಚಲನವಲಗಳ ಬಗ್ಗೆ ಗ್ರಾಮದ ಜನರನ್ನು ಪ್ರಶ್ನಿಸಿದರು. 

ನಿರಂಜನ್‌ ಎಂಜಿನಿಯರಿಂಗ್ ಪದವೀಧರರಾಗಿದ್ದು, ನಿರುದ್ಯೋಗಿಯಾಗಿದ್ದಾರೆ. ಸದಾ ಮನೆಯಲ್ಲಿಯೇ ಇರುತ್ತಾರೆ. ನೆರೆ ಹೊರೆಯವರೊಂದಿಗೂ ಹೆಚ್ಚು ಮಾತನಾಡುವುದಿಲ್ಲ ಮತ್ತು ಬೆರೆಯುವುದಿಲ್ಲ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಶನಿವಾರ ನಿರಂಜನ್‌ ಕರೆ ಮಾಡಿ ನಿಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಏನು ನಿಂದಿಸಿದ್ದಾರೆ ಎಂಬ ಮಾಹಿತಿಯನ್ನು ವಿಶೇಷ ತನಿಖಾ ತಂಡ ಬಹಿರಂಗಪಡಿಸಿಲ್ಲ. ಸಂಜೆಯವರೆಗೂ ವಿಶೇಷ ತಂಡ ವಿಚಾರಣೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.