ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಮಾರಗೊಂಡನಹಳ್ಳಿ ಬಳಿ ಶನಿವಾರ ನಡೆದ ಅಪಘಾತದಲ್ಲಿ ಕಾಮಕ್ಕ (64) ಮೃತಪಟ್ಟಿದ್ದಾರೆ.
ಕರೆಮಾದೇನಹಳ್ಳಿಯ ಮಗಳ ಮನೆಗೆ ಹಬ್ಬಕ್ಕಾಗಿ ಬಂದಿದ್ದ ಗುಡ್ಡದಜೋಗಿಹಳ್ಳಿ ಕಾಮಕ್ಕ ಹಬ್ಬ ಮುಗಿಸಿಕೊಂಡು ಕರೆಮಾದೇನಹಳ್ಳಿ ಗ್ರಾಮದಿಂದ ಮಾರಗೊಂಡನಹಳ್ಳಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಬರುವಾಗ ಕಾಮಕ್ಕ ಇಳಿಯುವುದಕ್ಕೂ ಮೊದಲೇ ಬಸ್ ಚಾಲಕ ಮುಂದೆ ಹೋಗಿದ್ದಾನೆ. ಕಾಮಕ್ಕ ಆಯತಪ್ಪಿ ಬಸ್‌ನಿಂದ ಕೆಳಗೆ ಬಿದ್ದಾಗ ಬಸ್ ಹಿಂದಿನ ಚಕ್ರ ಮಹಿಳೆಯ ಮೇಲೆ ಹರಿದು ಗಾಯಗೊಂಡಿದ್ದಾರೆ. ಶಿರಾ ಆಸ್ಪತ್ರೆಗೆ ಕರೆತರುವಾಗ ಮೃತ ಪಟ್ಟಿದ್ದಾರೆ.
ಶಿರಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.