ADVERTISEMENT

ಗ್ರಾಮಲೆಕ್ಕಿಗನ ಹತ್ಯೆ: ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 12:32 IST
Last Updated 24 ಡಿಸೆಂಬರ್ 2018, 12:32 IST
ಉಪವಿಭಾಗಾಧಿಕಾರಿ ಶಿವಕುಮಾರ್ ಅವರಿಗೆ ಕಂದಾಯ ಇಲಾಖೆ ನೌಕರರು ಮನವಿ ಸಲ್ಲಿಸಿದರು
ಉಪವಿಭಾಗಾಧಿಕಾರಿ ಶಿವಕುಮಾರ್ ಅವರಿಗೆ ಕಂದಾಯ ಇಲಾಖೆ ನೌಕರರು ಮನವಿ ಸಲ್ಲಿಸಿದರು   

ತುಮಕೂರು: ಗ್ರಾಮಲೆಕ್ಕಾಧಿಕಾರಿ ಸಾಹೇಬ್‌ ಪಟೇಲ್‌ ಅವರ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಸಂಘದವರು ಸೋಮವಾರ ಸಾಮೂಹಿಕ ರಜೆ ಹಾಕಿ ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕರ್ವವ್ಯದಲ್ಲಿದ್ದ ಚಿಕಲಪರ್ವಿ ಗ್ರಾಮಲೆಕ್ಕಿಗ ಸಾಹೇಬ್ ಪಾಟೀಲ್ ಎಂಬುವರು ಮರಳು ತುಂಬಿದ್ದ ಲಾರಿ, ರಾಯಲ್ಟಿ ನೀಡಿದೆಯೇ ಎಂದು ಚೆಕ್ ಮಾಡಲು ಮರಳಿನ ಲಾರಿಯನ್ನು ಅಡ್ಡಗಟ್ಟಿದಾಗ, ಲಾರಿಯ ಚಾಲಕ ಅವರ ಮೇಲೆ ವಾಹನ ಹತ್ತಿಸಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂದು ಆರೋಪಿಸಿದರು.

ಮೃತರ ಕುಟುಂಬಕ್ಕೆ ಹೆಚ್ಚಿನ ಅರ್ಥಿಕ ನೆರವು ನೀಡುವುದರ ಜೊತೆಗೆ, ಇಂತಹ ಕೆಲಸಗಳಿಗೆ ನಿಯೋಜಿತರಾಗುವ ಕಂದಾಯ ಇಲಾಖೆಯ ನೌಕರರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಕರಣವನ್ನು ಸಿಓಡಿ ತನಿಖೆಗೆ ಒಳಪಡಿಸಿ, ಇದರ ಹಿಂದಿರುವ ಪ್ರಭಾವಿ ವ್ಯಕ್ತಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಕುಟುಂಬ ಬೀದಿ ಪಾಲಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ ಮನವಿಯನ್ನು ಮುಖ್ಯಮಂತ್ರಿಯವರಿಗೆ ಕಳುಹಿಸಲು ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್‌ ಅವರಿಗೆ ಕಂದಾಯ ಇಲಾಖೆಯ ನೌಕರರು ಸಲ್ಲಿಸಿದರು.

ಕಂದಾಯ ಇಲಾಖೆಯ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ.ಮಹೇಶ್, ಮಂಜುನಾಥ ಸೇರಿದಂತೆ ಎಲ್ಲಾ ವೃತ್ತಗಳ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಸಹಾಯಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.