ಜೈಲು
ಮಧುಗಿರಿ: ಹಲ್ಲೆ ಮತ್ತು ಬೆದರಿಕೆ ಪ್ರಕರಣದಲ್ಲಿ ಮೊದಲನೇ ಅಪರಾಧಿಗೆ ಒಂದು ವರ್ಷ ಜೈಲು, ₹1,000 ದಂಡ ಹಾಗೂ ಇಬ್ಬರು ಅಪರಾಧಿಗಳಿಗೆ ತಲಾ ₹1,000 ದಂಡ ವಿಧಿಸಿ ಸೆಷನ್ಸ್ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
2022 ಜನವರಿ 20ರಂದು ಕೊರಟಗೆರೆಯ ಹನುಮಂತಪುರದ ನಿವಾಸಿಗಳಾದ ಕೆ.ಟಿ. ವೆಂಕಟೇಶ್ ರೋಹಿತ್ ಮತ್ತು ಕಿಶೋರ್ ಸೇರಿಕೊಂಡು ಕರ್ನಾಟಕ ಎಟಿಎಂ ಎದುರಿನ ಖಾಲಿ ಜಾಗದಲ್ಲಿ ಷೆಡ್ ನಿರ್ಮಿಸುತ್ತಿದ್ದ ಉಮಾಶಂಕರ್, ಅವರ ತಂದೆ ಕುಮಾರಸ್ವಾಮಿ ಹಾಗೂ ನವೀನ್ ಎಂಬುವವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಧೀಶ ಯಾದವ ಕರಕೇರ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಬಿ.ಎಂ.ನಿರಂಜನ ಮೂರ್ತಿ ಸರ್ಕಾರದ ಪರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.